
ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಯ ನೌಕರರು ಸೇರಿ ತಾಲ್ಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಪುನಃರಚನೆ ಸಭೆಯನ್ನು ನಡೆಸಿ, ಪುನರಚಿತ ಕಾರ್ಯಕಾರಿ ಸಮಿತಿಗೆ ಗೌರವಾಧ್ಯಕ್ಷರನ್ನಾಗಿ ಕೆ.ರಾಮಚಂದ್ರಪ್ಪ, ಅಧ್ಯಕ್ಷರಾಗಿ ಎಸ್.ಮಂಜುನಾಥ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಪುನರಚಿತ ಕಾರ್ಯಕಾರಿ ಸಮಿತಿಗೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಆರ್.ಶಿವಶಂಕರ, ಖಜಾಂಚಿಯಾಗಿ ಎಂ.ಎಸ್.ಕಿರಣ್ ಕುಮಾರ್, ಉಪಾಧ್ಯಕ್ಷರುಗಳಾಗಿ ರಮೇಶ್, ಬಹುಗುಣ ಹರಳಯ್ಯ, ಸಹಕಾರ್ಯದರ್ಶಿಯಾಗಿ ಟಿ.ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಲೋಹಿತ್, ಮಂಜುನಾಥ್, ಆರ್.ಕೋಟಿಲಿಂಗಯ್ಯ, ಭಾಗ್ಯಮ್ಮ ,ಸಂಘದ ನಿರ್ದೇಶಕರಾಗಿ ಶ್ರೀವಿವೇಕ್ ತೇಜಸ್ವಿ, ಶ್ರೀಮತಿ ರತ್ನಕ್ಕ, ಶ್ರೀಮತಿ ಸುಮಿತ್ರಮ್ಮ, ಹನುಮಪ್ಪ, ಲೆಕ್ಕಪರಿಶೋಧಕರಾದ ಶ್ರೀಗುರು ಸಾಗರ್, ಸಲಹಾ ಸಮಿತಿಯ ಮುಖ್ಯಸ್ಥರಾಗಿ ಪಾತಪ್ಪ, ಎನ್.ಆರ್.ರಾಮಣ್ಣ, ಹೆಚ್.ಓ.ತಿಪ್ಪೆಸ್ವಾಮಿ, ಪಿ.ಇ.ರಂಗಸ್ವಾಮಿ, ಹೆಚ್.ಕೆಂಚಣ್ಣ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಅಭಿಯಂತರರಾದ ಶ್ರೀಪಾತಪ್ಪ, ನಿಕಟಪೂರ್ವ ಅಧ್ಯಕ್ಷರಾದ ಬಾಲೇನಹಳ್ಳಿ ರಾಮಣ್ಣ, ಉಪನ್ಯಾಸಕರಾದ ರಾಮಚಂದ್ರಪ್ಪ, ಸಮುದಾಯದ ಹಿರಿಯ ಮುಖಂಡರಾದ ಎಂ.ಡಿ.ಸಣ್ಣಪ್ಪ, ಆರ್.ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
