
ಹಿರಿಯೂರು :
ನಗರದ ವೇದಾವತಿ ಬಡಾವಣೆಯ 3 ನೇ ವಾರ್ಡ್ “ಡಾಗ್ ಸರ್ಕಲ್ ” ನಲ್ಲಿ ಏಪ್ರಿಲ್ -23 ರಂದು ಕಸದ ಗಾಡಿಗೆ ಸಹಾಯಕ ಸಿಬ್ಬಂದಿ ಇಲ್ಲದೆ ಡ್ರೈವರ್ ಒಬ್ಬರೇ ಬಂದ ಕಾರಣ ಮಹಿಳೆಯರು, ಮಕ್ಕಳು ಕಸವನ್ನು ಗಾಡಿಗೆ ಹಾಕಲು ಹರ ಸಾಹಸ ಪಡುತ್ತಿರುವ ದೃಶ್ಯ ಕಂಡು ಬಂದಿದೆ ಎಂಬುದಾಗಿ “ಡಾಗ್ ಸರ್ಕಲ್ “ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ತಿಳಿಸಿದ್ದಾರೆ.
ಈ ಭಾಗದಲ್ಲಿ ರಸ್ತೆ, ಉದ್ಯಾನವನ ಜಾಗಗಳನ್ನು ಒತ್ತುವರಿ ಮಾಡಲಾಗಿದೆ ಆದಾಗ್ಯೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಚರಂಡಿ ಸ್ವಚ್ಛತೆ ಕೂಡ ಕಾಲ ಕಾಲಕ್ಕೆ ಮಾಡುತ್ತಿಲ್ಲ,ಎತ್ತ ಸಾಗುತ್ತಿದೆ ಸ್ವಚ್ಛ ಭಾರತ್ ಕಾರ್ಯಕ್ರಮ ಎಂದು ಪ್ರಶ್ನೆ ಮಾಡಿದ ರಂಗನಾಥ್ ಅವರು, ನಗರಸಭೆ ಅಧಿಕಾರಿಗಳು ಇತ್ತ ಗಮನಿಸಿ ಡಾಗ್ ಸರ್ಕಲ್ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
