
ಹಿರಿಯೂರು:
ಸಮಾಜದಲ್ಲಿ ಹೇರಳವಾಗಿ ಲಭ್ಯವಿರುವ ದುಶ್ಚಟಗಳಿಗೆ ಬಲಿಯಾಗದೆ ಸ್ವಯಂ ನಿಗ್ರಹಿಸಿಕೊಳ್ಳುವುದು ಅಗತ್ಯವಾಗಿದೆ ಎಂಬುದಾಗಿ ತಾಲ್ಲೂಕು ದಂಡಾಧಿಕಾರಿ ಮತ್ತು ತಹಶೀಲ್ದಾರ್ ಎಂ.ಸಿದ್ದೇಶ್ ಅವರು ಹೇಳಿದರು.
ಜಿಲ್ಲಾ ಆಡಳಿತ , ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನಿನ ಜಾಗೃತಿ ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಕಾನೂನಿನಅರಿವನ್ನು ಹೊಂದಬೇಕಿದೆ. ಸುಳ್ಳು, ಕಳ್ಳತನ, ಮೋಸ, ಭ್ರಷ್ಟಾಚಾರ, ಹಿಂಸಾಚಾರ, ಅತ್ಯಾಚಾರ, ಅಪರಾಧ, ಭಯೋತ್ಪಾದನೆ, ಶೋಷಣೆ ಹಲ್ಲೆಯಂತಹ ವಿಕಾರಗಳಿಂದ ಮುಕ್ತರಾಗಬೇಕಿದೆ. ಎಂದರಲ್ಲದೆ,
ನೈತಿಕ ಪ್ರಜ್ಞೆಯ ಮೂಲಕ ಕಾನೂನುಗಳನ್ನು ಪಾಲಿಸಬೇಕು.ಆಸೆ-ಆಮಿಷಗಳ ಮೂಲಕ ಮತ್ತು ದಿಢೀರ್ ಶ್ರೀಮಂತಿಕೆಗೆ ಮಾರು ಹೋಗಿ ಅಪರಾಧ ಕೃತ್ಯಗಳಲ್ಲಿ ಬಾಗಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಸಮಾಜದಲ್ಲಿ ನಡೆಯುವ ದುಷ್ಟತೆಗಳನ್ನು ತಡೆಯಬೇಕಿದೆ. ಜನಸಾಮಾನ್ಯರ ಶಾಂತಿ, ನೆಮ್ಮದಿ, ಸರ್ಕಾರಿ ನೀತಿ-ನಿಯಮಗಳ ಪಾಲನೆಯಲ್ಲಿ ಸಾರ್ವಜನಿಕರು ಜವಬ್ದಾರಿಯುತ ನಾಗರೀಕರಾಗಿ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂಬುದಾಗಿ ಅವರು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶ್ರೀಮತಿ ಶಶಿಕಲಾರವಿಶಂಕರ್ ಅವರು ಮಾತನಾಡಿ ಮಹಿಳಾ ಶೋಷಣೆ, ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿಉವುದು ಕಳವಳ ಸಂಗತಿಯಾಗಿದೆ. ಎಂದರಲ್ಲದೆ,
ಯುವಜನರು ಮಾದಕ ವಸ್ತುಗಳಿಗೆ ಒಗ್ಗಿಕೊಂಡು ಅಪರಾದ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಪರಾಧಗಳ ನಿಯಂತ್ರಣಕ್ಕೆ ಮತ್ತು ಕಠಿಣ ಕಾನೂನುಗಳ ಜಾರಿಯ ಅವಶ್ಯಕತೆ ಇದೆ.ಸಣ್ಣ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಗತಿಸುತ್ತಿವೆ. ಪೋಷಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಗಮನಹರಿಸಿ ಸಮುದಾಯದಲ್ಲಿನ ಶೋಷಣೆಗಳ ಬಗ್ಗೆ ತಿಳಿಹೇಳಬೇಕಿದೆ ಎಂಬುದಾಗಿ ಅವರು ಹೇಳಿದರು.
ಮಾನವ ಕಳ್ಳಸಾಗಣೆ ಅಪ್ರಾಪ್ತ ವಯಸ್ಸಿನವರಿಂದ ದುಡಿಸಿಕೊಳ್ಳುವ ಬಗ್ಗೆ ಫೋಕ್ಸೋ ಕಾಯ್ದೆ ಮಹಿಳಾ ದೌರ್ಜನ್ಯ ಮಾನಸಿಕ ಕಿರುಕುಳ ಸಾಮಾಜಿಕ ಜಾಲತಾಣಗಳಿಂದ ಆಗುವ ವಂಚನೆಗಳು ಸಂಚಾರಿ ನಿಯಮಗಳ ಪಾಲನೆ ವೇಗವಾಗಿ ವಾಹನ ಚಲಾವಣೆ ಮಾಡುವ ಬಗ್ಗೆ ಕಾನೂನುಗಳ ಮಾಹಿತಿಯುಳ್ಳ ನಾಟಕ ಪ್ರದರ್ಶನ ನಡೆಯಿತು.
ಗ್ರಾಮಾಂತರ ಪೋಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಈ.ಆನಂದ್ ಐಮಂಗಲ ಪೋಲಿಸ್ ಠಾಣೆ ವೃತ್ತ ನಿರೀಕ್ಷಕರಾದ ಗುಡ್ಡಪ್ಪ, ಆರಕ್ಷಕ ನಿರೀಕ್ಷಕರಾದ ದೀಪು, ಎ.ಎಸ್. ಐ.ರೇಖಾರವೀಂದ್ರನಾಥ್, ಶಶಿಕಲಾ, ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗೇಂದ್ರಪ್ಪ ಹರ್ತಿಕೋಟೆ, ದಯಾನಂದ, ಕಲಾವಿದ ಮಾರುತೇಶ್, ಮಸ್ಕಲ್ ನವೀನ್, ಚಮನ್ ಷರೀಫ್, ಕಾರ್ಮಿಕ ಸಂಘದ ಅಧ್ಯಕ್ಷರಾದ ಪರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

