April 21, 2026
0000002

ಹಿರಿಯೂರು :

ಮರ್ಯಾದೆ ಹೆಸರಿನಲ್ಲಿ 7 ತಿಂಗಳ ಗರ್ಭಿಣಿ ಮಾನ್ಯ ಪಾಟೀಲ್ ವಿವೇಕಾನಂದ ದೊಡ್ಡಮನಿಯನ್ನು ತಂದೆಯೇ ನಿರ್ಧಾಕ್ಷಿಣ್ಯವಾಗಿ ಹತ್ಯೆ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದ್ದು, ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂ ಈ ಬಗ್ಗೆ ವಿಶೇಷ ಕಾನೂನನ್ನು ಕೂಡಲೇ ಜಾರಿ ಮಾಡಬೇಕು ಎಂಬುದಾಗಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರ ಹೇಳಿದರು.

ರಾಜ್ಯ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಹುಬ್ಬಳ್ಳಿಯ ಮಾನ್ಯ ಪಾಟೀಲ್ ವಿವೇಕಾನಂದ ದೊಡ್ಡಮನಿ ಹತ್ಯೆಯನ್ನು ಖಂಡಿಸಿ, ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ.ಮಹದೇವಪ್ಪ ರವರನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ನೊಂದ ವಿವೇಕಾನಂದ ದೊಡ್ಡಮನಿ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು, ವಿವೇಕಾನಂದ ದೊಡ್ಮನಿ ಈತನಿಗೆ ಸರ್ಕಾರಿ ಕೆಲಸ ಕೊಡಬೇಕು, ಮಾರ್ಯಾದೆಗೇಡು ಕೊಲೆ ಮಾಡಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾನ್ಯ ಸಚಿವರಾದ ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಮರ್ಯಾದೆ ಗೇಡು ಹತ್ಯೆ ವಿಚಾರವಾಗಿ ಕಾನೂನುಗಳನ್ನು ಅತಿ ತುರ್ತಾಗಿ ಜಾರಿಗೆ ತರಲು ನಾನು ಮುಖ್ಯಮಂತ್ರಿಗಳ ಬಳಿ ಹಾಗೂ ಕ್ಯಾಬಿನೆಟ್ ಸಚಿವರುಗಳ ಬಳಿ ಮಾತನಾಡಿದ್ದೇನೆ ಆದಷ್ಟು ಬೇಗನೆ ಮರ್ಯಾದೆ ಹತ್ಯಾ ವಿಚಾರವಾಗಿ ಕಾನೂನು ತರಲು ನಮ್ಮ ಸರ್ಕಾರ ಸಿದ್ಧವಾಗಿದೆ

ಜೊತೆಗೆ ಮರ್ಯಾದೆ ಗೇಡು ಹತ್ಯೆ ಮಾಡಿರುವ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷ ನೀಡುವ ಜೊತೆಗೆ ಆರೋಪಿಗಳ ಆಸ್ತಿಪಾಸ್ತಿಗಳನ್ನು ಮುಟ್ಟುಕೋಲು ಹಾಕಿಕೊಳ್ಳಲಾಗುವುದು ಎಂಬುದಾಗಿ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಸಿ.ಮಹದೇವಪ್ಪರವರು ಈ ಸಂದರ್ಭದಲ್ಲಿ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ರಾಘವೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಎನ್.ಮಾರುತಿ, ಹಿರಿಯೂರು ತಾಲೂಕು ಅಧ್ಯಕ್ಷರಾದ ಕೆ.ಓಂಕಾರಮೂರ್ತಿ, ದಲಿತ ಯುವ ಮುಖಂಡರಾದ ಎಸ್.ಹನುಮಂತಪ್ಪ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *