
ಹಿರಿಯೂರು:
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಶ್ರೀ ಅಂಗಾರಕ ಗಣಪತಿ ದೇವಾಲಯದಲ್ಲಿ ಮಂಗಳವಾರದ ವಿಶೇಷ ಸಂಕಷ್ಟಹರ ಚತುರ್ಥಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆಯಿಂದಲೇ ಅರ್ಚನೆ, ಅಭಿಷೇಕ, ಹೋಮ, ವಿವಿಧ ಹೂವಿನಅಲಂಕಾರ, ಗರಿಕೆ ಅಲಂಕಾರ, ಕಡುಬಿನ ಹಾರ ಮಾಡಲಾಗಿತ್ತು. ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಗಣಪತಿ ಕೃಪೆಗೆ ಪಾತ್ರರಾದರು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಉಪಹಾರ ವಿತರಣೆ ಮಾಡಲಾಯಿತು.

