?????????????????????????????????????????????????????????

ಹಿರಿಯೂರು:
ಜಗತ್ತು ಜಾತಿ, ಮತ, ಧರ್ಮಗಳ ಗೊಂದಲದಲ್ಲಿ ಸಿಲುಕಿರುವಾಗ ಕುವೆಂಪು ಅವರ ವಿಶ್ವ ಮಾನವ ಸಂದೇಶ ಅತ್ಯಂತ ಪ್ರಸ್ತುತವಾಗಿದೆ ಎಂಬುದಾಗಿ ಹಿರಿಯ ಶಿಕ್ಷಕರಾದ ನೀಲಕಂಠಪ್ಪ ಅವರು ಹೇಳಿದರು.
ತಾಲ್ಲೂಕಿನ ಯರಬಳ್ಳಿ ಪಿ.ಎಂ.ಶ್ರೀ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರ ಕವಿ ಕುವೆಂಪುರವರ 121 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂಗ್ಲೀಷ್ ಭಾಷಾ ಶಿಕ್ಷಕರಾದ ಮಂಜುನಾಥ್ ಅವರು ಮಾತನಾಡಿ ಕುವೆಂಪು ಅವರ ಜನ್ಮ ದಿನವು ಕೇವಲ ಒಬ್ಬ ವ್ಯಕ್ತಿಯ ಆಚರಣೆಯಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಸಂಕುಚಿತ ಭಾವನೆಯನ್ನು ಬಿಟ್ಟು ವಿಶ್ವ ಮಾನವನಾಗಲು ಪ್ರೇರೇಪಿಸುವ ದಿನವಾಗಿದೆ ಎಂಬುದಾಗಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಸವಿತಾ ಅವರು ಮಾತನಾಡಿ ಕುವೆಂಪು ಅವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು. ಅವರ ಸಾಹಿತ್ಯಿಕ ಸಾಧನೆಯನ್ನು ಸ್ಮರಿಸುವುದು ಹಾಗೂ ಇಂದಿನ ಮಕ್ಕಳಿಗೆ ಕುವೆಂಪು ರವರ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಬಾನ, ವಿಜಯಮ್ಮ, ಅನ್ನಪೂರ್ಣ, ಭುವನಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
