March 3, 2026
00004

ಹಿರಿಯೂರು:

ನಗರದ ಲಕ್ಕವ್ವನಹಳ್ಳಿ ರಸ್ತೆ ಬಳಿ ಇರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶ್ರೀ ಅಯ್ಯಪ್ಪಸ್ವಾಮಿ  ಭಕ್ತ ಮಂಡಳಿ ವತಿಯಿಂದ ಗುರುಸ್ವಾಮಿಗಳಾದ  ಶ್ರೀ ಸದಾನಂದಸ್ವಾಮೀಜಿಯವರ  ನೇತೃತ್ವದಲ್ಲಿ ಮಂಡಲ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇದರ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಅಯ್ಯಪ್ಪಸ್ವಾಮಿಯ ಭವ್ಯ ಮೆರವಣಿಗೆ  ನಡೆಯಿತು. ಭಕ್ತಾದಿಗಳ ಮನೋವ್ರತ ಸಿದ್ಧಿಗಾಗಿ 18 ಪಡಿ ಜ್ಯೋತಿ ಸ್ತಂಭಗಳನ್ನು ಬೆಳಗಿಸುವ ಕಾರ್ಯಕ್ರಮವೂ ನಡೆಯಿತು. ವಿದ್ಯಾರ್ಥಿಗಳಿಗಾಗಿ ಪಣತೆ ಹಚ್ಚುವಅವಕಾಶ ಕಲಪಿಸಲಾಗಿತ್ತು.ಭಕ್ತಾದಿಗಳು ಸ್ವಾಮಿಯ ಸನ್ನಿಧಾನಕ್ಕೆ  ಬಂದು ದರ್ಶನ ಪಡೆದರು.ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಅಯ್ಯಪ್ಪಸ್ವಾಮಿ, ಗಣೇಶ, ಸುಬ್ರಹ್ಮಣ್ಯ ಹಾಗೂ ನಾಗದೇವತೆ ನೂತನ ಪಂಚಲೋಹದ ವಿಗ್ರಹ ನಿರ್ಮಾಣಕ್ಕೆ  ಭಕ್ತಾದಿಗಳು ನೆರವು ನೀಡಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ  ಗುರುಸ್ವಾಮಿಗಳಾದ ಶ್ರೀ ಸದಾನಂದಸ್ವಾಮೀಜಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *