April 28, 2026
00003

ಹಿರಿಯೂರು:

ಯಾವುದೇ ಮಾಧ್ಯಮಗಳು ಸುದ್ಧಿಯನ್ನು  ವೈಭವೀಕರರಿಸುವ ಬದಲು ಸಮಾಜವನ್ನು  ತಿದ್ದುವಂತಹ ಸುದ್ಧಿಗಳನ್ನು  ಹೆಚ್ಚು ಬಿತ್ತರಿಸಬೇಕು  ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಸಲಹೆ ನೀಡಿದರು.

ನಗರದಲ್ಲಿರುವ  ಕಾಂಗ್ರೆಸ್ ಕಚೇರಿಯಲ್ಲಿ  ಹಮ್ಮಿಕೊಳ್ಳಲಾಗಿದ್ದ  ಕಾರ್ಯಕ್ರಮದಲ್ಲಿ “ ಪ್ರಜಾವಾಣಿ”ಯ ನೂತನ ಕ್ಯಾಲೆಂಡರ್   ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ  ನಾಲ್ಕನೆಯ ಅಂಗ ಎಂದೇ ಕರೆಯಲಾಗುವ ಪತ್ರಿಕಾ ರಂಗವು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಲೋಪಗಳನ್ನು ಕ್ರಿಯಾತ್ಮಕವಾಗಿ  ತಿದ್ದುವ ಕೆಲಸ ಮಾಡಬೇಕು.ಪತ್ರಿಕೆ ಅಥವಾ ಟಿ.ವಿ. ಮಾಧ್ಯಮ ಪಕ್ಷವೊಂದರ ಪರವಾಗಿದ್ದರೆ ಸಾರ್ವಜನಿಕರ  ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಮಾಧ್ಯಮಗಳು ತೀರ್ಪು ಕೊಡುವ ಕೆಲಸ ಮಾಡಬಾರದು ಎಂಬುದಾಗಿ ಅವರು ಎಚ್ಚರಿಸಿದರು.

‘ಪ್ರಜಾವಾಣಿ’ ಇಂದಿಗೂ ನಾಡಿನ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿವಯೇ ಉಳಿದಿದೆ. ಪತ್ರಿಕೆಯಲ್ಲಿನ ಸುದ್ಧಿಗಳು, ಪುಟ ವಿನ್ಯಾಸ,ಅಕ್ಷರಗಳ ಜೋಡಣೆ, ಸುದ್ಧಿಗಳ ವಿಶ್ಲೇಷಣೆ, ವೈವಿಧ್ಯತೆ ಗಮನ ಸೆಳೆಯುತ್ತದೆ.

ಎಷ್ಟೇ ಒತ್ತಡದ ಕೆಲಸಗಳಿದ್ದರೂ ಬೆಳಿಗ್ಗೆ ಎದ್ದ ತಕ್ಷಣ ಪ್ರಜಾವಾಣಿ ಪುಟಗಳನ್ನು ತಿರುವಿ ಹಾಕಿದರೇ ಸಮಾಧಾನ. ನನ್ನ ಶೈಕ್ಷಣಿಕ  ದಿನಗಳಿಂದಲೂ ತಪ್ಪದೆ ‘ಪ್ರಜಾವಾಣಿ’  ಓದುತ್ತಿರುವೆ ಎಂದು ಪತ್ರಿಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಪ್ರೌಢಶಾಲೆಯಿಂದ ಪದವಿ ತರಗತಿವರೆಗಿನ  ವಿದ್ಯಾರ್ಥಿಗಳಿಗೆ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಅಭ್ಯರ್ಥಿಗಳಿಗೆ  ‘ಪ್ರಜಾವಾಣಿ’ ಉತ್ತಮ ಮಾರ್ಗದರ್ಶನ ನೀಡುತ್ತದೆ. ಮಹಿಳೆಯರು, ಪುರುಷರು, ಕ್ರೀಡಾಪಟುಗಳಿಗೆ, ಆಧ್ಯಾತ್ಮಿಕ ವಿಚಾರವಾದಿಗಳಿಗೆ ಈ ಪತ್ರಿಕೆ ಆಕರ್ಷಣೀಯ. ದೇವರು ಹೊಸವರ್ಷ ಎಲ್ಲರಿಗೂ  ಸುಖ, ನೆಮ್ಮದಿ ಕೊಟ್ಟು ಕಾಪಾಡಲಿ ಎಂಬುದಾಗಿ ಅವರು ಹಾರೈಸಿದರು.

 “ಪ್ರಜಾವಾಣಿ” ಪ್ರಸರಣ ವಿಭಾಗದ  ಜಿಲ್ಲಾ ವ್ಯವಸ್ಥಾಪಕರಾದ ಹೆಚ್.ನರೇಂದ್ರ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡರುಗಳಾದ ಖಾದಿರಮೇಶ್, ಈರಲಿಂಗೇಗೌಡ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಕಂದಿಕೆರೆಸೂರೇಶ್ ಬಾಬು, ಗಿಡ್ಡೋಬನಹಳ್ಳಿಅಶೋಕ್, ಶಿವರಂಜಿನಿ ಯಾದವ್, ಜೆ.ಆರ್.ಸುಜಾತಾ, ಜ್ಞಾನೇಶ್, ವಿ.ಶಿವಕುಮಾರ್, ರಜೀಯಾ ಸುಲ್ತಾನ, ನಾಗರತ್ನ,  ಮಮತಾಸುಂದರ್,  ಜಿ.ದಾದಾಪೀರ್, ‘ಪ್ರಜಾವಾಣಿ’  ಜಿಲ್ಲಾ ವಿತರಕ ಪ್ರಶಾಂತ್ ರಾಜ್, ಸ್ಥಳೀಯ ವಿತರಕ ಏಕಾಂತಪ್ಪ ಅವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *