
ಹಿರಿಯೂರು :
ಇದೇ ಡಿಸೆಂಬರ್ 21 ರ ಭಾನುವಾರ ಪೋಲಿಯೋ ದಿನವನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ನಿಮ್ಮ ಮನೆಯಲ್ಲಿರುವ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ 2 ಹನಿ ಪೋಲಿಯೋ ಲಸಿಕೆಯನ್ನು ಹಾಕಿಸುವ ಮೂಲಕ ನಿಮ್ಮ ಮಗುವನ್ನು ಪೋಲಿಯೋ ರೋಗದಿಂದ ರಕ್ಷಿಸಬೇಕು ಎಂಬುದಾಗಿ ಮನವಿಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾನಸಮಂಜುನಾಥ್ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿರುವ ಇವರು ಭಾರತ ಪೋಲಿಯೋ ಮುಕ್ತವಾಗಿದೆ, ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ರೋಗ ಭೀತಿಯನ್ನುಂಟು ಮಾಡಿದೆ, ಈ ಭೀತಿ ಮತ್ತೆ ಭಾರತದಲ್ಲಿ ಮರುಕಳಿಸಬಾರದೆಂದರೆ ಪ್ರತಿಯೊಬ್ಬರೂ ನಿಮ್ಮ ಮನೆಯ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ 2 ಹನಿ ಪೋಲಿಯೋ ಡ್ರಾಪ್ಸ್ ಹಾಕಿಸಬೇಕು ಎಂದಿದ್ದಾರಲ್ಲದೆ,
ಭಾರತ ನಿಮ್ಮೆಲ್ಲರ ಸಹಕಾರದಿಂದ ಈಗಾಗಲೇ ಪೋಲಿಯೋ ರೋಗದ ವಿರುದ್ಧ ಜಯ ಸಾಧಿಸಿದ್ದು, ಇದು ಹೀಗೆ ಮುಂದುವರೆಯಬೇಕಾದರೆ ನಾವು ಜಾಗೃತರಾಗುವ ಮೂಲಕ ನಮ್ಮ ಮನೆಯ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು, 2 ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು ತರಲಿದ್ದು, ಈ ಕೂಡಲೇ ನಿಮ್ಮ ಮನೆಯ ಹತ್ತಿರದಲ್ಲಿರುವ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ, ಪೋಲಿಯೋ ಲಸಿಕೆ ಹಾಕಿಸಬೇಕು ಎಂಬುದಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
