
ಹಿರಿಯೂರು :
ಅನಾರೋಗ್ಯದಿಂದ ಬಳಲುತ್ತಿದ್ದ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಯಮ ವ್ಯವಸ್ಥಾಪಕರಾದ ಶ್ರೀರಾಮ್ ವಿಲಾಸ್ ವೇದಾಂತಿ ಮಹಾರಾಜರು ದೈವಾದೀನರಾಗಿದ್ದಾರೆ. ವೇದಾಂತ ಸಂಭೂತರು, ಸಾಧು ಸಜ್ಜನರು, ಶ್ರೀರಾಮ ಭಕ್ತರು ಆದ ಇವರ ನಿಧನವು ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಶ್ರೀರಾಮ್ ವಿಲಾಸ್ ವೇದಾಂತಿ ಮಹಾರಾಜರವರ ನಿಧನಕ್ಕೆ “ಹಿರಿಯೂರುನ್ಯೂಸ್” ತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀರಾಮ್ ವಿಲಾಸ್ ವೇದಾಂತಿ ಮಹಾರಾಜರು ಉತ್ತರಪ್ರದೇಶದ ಬಿಜೆಪಿ ಪರವಾಗಿ ಪಾರ್ಲಿಮೆಂಟ್ ಸದಸ್ಯರಾಗಿ ಕೆಲಸ ನಿರ್ವಹಿಸಿರುತ್ತಾರೆ ಆಧ್ಯಾತ್ಮರಂಗದಲ್ಲಿ ಚಿಂತನಾಶೀಲರಾಗಿರುತ್ತಾರೆ. ಇವರ ನಿಧನಕ್ಕೆ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಉಮೇಶ್ ಯಾದವ್, ಶಿವರಾಜ್ ನಾಯಕ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯಿತ್ ವುಲ್ಲಾ ಇವರುಗಳು ಸಂತಾಪಸೂಚಿಸಿದ್ದಾರೆ.

