
ಹಿರಿಯೂರು:
ಹೆಣ್ಣು ಕರುಣಾಮಯಿ.ಸಹನಶೀಲಳು, ಹೆಣ್ಣನ್ನು ನದಿಗೆ ಹೋಲಿಸಲಾಗುತ್ತದೆ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ನದಿ ಕೊನೆಗೆ ಸಮುದ್ರವನ್ನು ಸೇರುವಂತೆ ಹೆಣ್ಣು ಮಗಳು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಕೊನೆಗೆ ಗಂಡನ ಮನೆ ತನ್ನ ಮನೆ ಎಂಬಂತೆ ಬದುಕು ನಡೆಸುತ್ತಾಳೆ ಇಂತಹ ಉತ್ತಮ ಗುಣ ಹೊಂದಿದ ಹೆಣ್ಣನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಎಂಬುದಾಗಿ ಇನ್ನರ್ವೀಲ್ ಅಧ್ಯಕ್ಷೆಯಾದ ರೋಷಣಿಮಹೇಶ ಹೇಳಿದರು..
ನಗರದ ಶ್ರೀದೇವರಾಜ ಅರಸು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಇನ್ನರ್ವೀಲ್ ಕ್ಲಬ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದೌರ್ಜನ್ಯದ ವಿರುದ್ಧ ತಿಳುವಳಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೆಣ್ಣಿನ ಮೇಲೆ ನಡೆಸುವ ದೌರ್ಜನ್ಯ ನಿಜಕ್ಕೂ ಅಮಾನವೀಯ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು, ಮಹಿಳೆಯರ ಶೋಷಣೆಯ ವಿರುದ್ಧ ಧ್ವನಿ ಎತ್ತಬೇಕು, ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನುಗಳ ಸದ್ಭಳಕೆಯಾಗಬೇಕು ಎಂಬುದಾಗಿ ಅವರು ಹೇಳಿದರು.
ಶ್ರೀಮತಿ ಸುವರ್ಣಪ್ರಶಾಂತ್ ಅವರು ಮಾತನಾಡಿ, ಮಹಿಳೆಯರು ಎಲ್ಲಾ ವಿಭಾಗಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದು, ಮಹಿಳೆ ಅಬಲೆಯಲ್ಲ ಸಬಲೇ ಎಂಬುದನ್ನು ಸಾಬೀತುಪಡಿಸಿದ್ದಾಳೆ, ಇಂದು ಕೌಟುಂಬಿಕ ಜೀವನದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ದುಡಿಯುವ ಮೂಲಕ ಸಂಸಾರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂಬುದಾಗಿ ಅವರು ಹೇಳಿದರು.
ಇನ್ನರ್ವೀಲ್ ಕ್ಲಬ್ ಕಾರ್ಯದರ್ಶಿಯಾದ ಸರ್ವಮಂಗಳ ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ನೆರೆಹೊರೆಯವರೊಂದಿಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಮೈಯನ್ನು ಮುಟ್ಟಿ ಮಾತನಾಡಿಸುವುದು ಚಾಕಲೇಟ್ ಆಸೆ ತೋರಿಸಿ ಕರೆಯುವುದು. ಇಂತಹವರನ್ನು ನಂಬಿದರೆ ಅನಾಹುತಗಳು ಆಗುತ್ತವೆ .ಆದ್ದರಿಂದ ಚಿಕ್ಕ ಮಕ್ಕಳು ಈ ಬಗ್ಗೆ ಜ್ಞಾನ ಹೊಂದಿರಬೇಕು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಕ್ಲಬ್ ಸದಸ್ಯರುಗಳಾದ ಶ್ರೀಮತಿ ಪ್ರೇಮ, ಇಂಪರಿತೇಶ್, ಶ್ರೀಮತಿ ಪದ್ಮಆನಂದ್, ಶ್ರೀಮತಿ ತ್ರಿವೇಣಿ ಶಶಿಧರ್ , ಶ್ರೀಮತಿ ಪದ್ಮಮಂಜೇಶ ಹಾಗೂ ವಾರ್ಡನ್ ಹೇಮಾ ಮತ್ತು ಶೋಭಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

