
ಹಿರಿಯೂರು :
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಳೆದ 15 ದಿನಗಳಿಂದ ಕಾವೇರಿ ತಂತ್ರಾಂಶದಲ್ಲಿ ವ್ಯತ್ಯಯ ಉಂಟಾಗಿ ಜಮೀನುಗಳ ಶೇರಿಂಗ್ ನಲ್ಲಿ, ಸರ್ವೇ ಸ್ಕೆಚ್ ಗಳಲ್ಲಿ, ಆಧಾರ ರದ್ಧತಿಯಲ್ಲಿ, ಬಡವರ ಬಗರ್ ಹುಕುಂ ಜಮೀನುಗಳ ಪೂಡಿ ಆಗುತ್ತಿಲ್ಲ, ಇದರಿಂದ ನಾನಾ ತರ ಸಮಸ್ಯೆಗಳಾಗುತ್ತಿವೆ. ಈ ತರ ನೋಂದಣಿ, ಭೂಮಾಪನ, ಕಂದಾಯ ಇಲಾಖೆ ಸಮಸ್ಯೆಗಳು ಉಂಟಾಗಿದೆ ಎಂಬುದಾಗಿ ಪಿಟ್ಲಾಲಿ ಶ್ರೀನಿವಾಸ್ ಹೇಳಿದರು.
ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ರಹಿತವಾಗಿ ಸೇವೆ ಮಾಡುವಂತೆ ಖಡಕ್ ಸೂಚನೆ ನೀಡುವ ಮೂಲಕ ಕಂದಾಯ ಇಲಾಖೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡಬೇಕೆಂದು ಸಾರ್ವಜನಿಕರ ಪರವಾಗಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ. ಇದರಿಂದ ರೈತರು ನಾಗರೀಕರು ಪರದಾಡುವಂತೆ ಆಗಿದೆ ಪ್ರತಿದಿನ ಇಲಾಖೆಗೆ ಬರುವುದು ವಾಪಸ್ ಹೋಗುವುದು. ಕೆಲವೊಂದು ವ್ಯಾಜ್ಯಗಳು ನ್ಯಾಯಾಲಯದಲ್ಲಿ ಹಾಗೂ ಸ್ವತಃ ತೀರ್ಮಾನ ಮಾಡಿಕೊಂಡು ನೋಂದಣಿಗೆ ಬಂದಿದ್ದಾಗ ಅಲ್ಲಿ ನೋಂದಣಿ ಆಗದೆ ಕೌಟುಂಬಿಕ ವ್ಯಾಜ್ಯ ವಿಸ್ತರಣೆಯಾಗುತ್ತಿದೆ.
ಕರ್ನಾಟಕದಲ್ಲಿ ವಿಶ್ವಕ್ಕೆ ಕೊಡುವಷ್ಟು ಸಾಫ್ಟ್ವೇರ್ ಡೆವಲಪ್ ಆಗಿದೆ .ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಕರ್ನಾಟಕದ ಸರ್ಕಾರಿ ಕಚೇರಿಗಳಲ್ಲಿ ಬ್ಯಾಂಕುಗಳಲ್ಲಿ ಸರ್ವರ್ ಸಮಸ್ಯೆಗಳಿಂದ ನಾಗರೀಕರಿಗೆ ರೈತರಿಗೆ ನಾನಾ ಸಮಸ್ಯೆ ಉಂಟಾಗಿದೆ. ಹಾಗೂ ತಾವುಗಳು ಇಲಾಖೆಯ ಪರಿಶೀಲನೆಗೆ ಆಧುನೀಕರಣಕ್ಕೆ ನಾನಾ ರೀತಿಯ ಪ್ರಯತ್ನ ಪಟ್ಟಿದ್ದರು ಅದು ಫಲ ಕೊಡುತ್ತಿಲ್ಲ. ಭ್ರಷ್ಟಾಚಾರ ನಿಲ್ಲುತ್ತಿಲ್ಲ ಸುಲಿಗೆ ಕಡಿಮೆಯಾಗುತ್ತಿಲ್ಲ
ಜನಸಾಮಾನ್ಯರಿಗೆ ಇಲಾಖೆಯ ಕೆಲಸಗಳು ದುಬಾರಿಯಾಗುತ್ತಿವೆ ಅಧಿಕಾರ ಶಾಶ್ವತವಲ್ಲ ನೀವು ಅಧಿಕಾರದಲ್ಲಿ ಇರುವ ಸಮಯದಲ್ಲಿ ಜನಸಾಮಾನ್ಯರಿಗೆ ಕಂದಾಯ ಇಲಾಖೆಯಲ್ಲಿ ಮುಕ್ತವಾಗಿ, ಭ್ರಷ್ಟಾಚಾರ ರಹಿತವಾಗಿ ಸೇವೆ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುವ ಮೂಲಕ ಕಂದಾಯ ಇಲಾಖೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡಬೇಕು ಎಂಬುದಾಗಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡರಿಗೆ ಮನವಿ ಮಾಡಿದ್ದಾರೆ.
