
ಹಿರಿಯೂರು:
ದಂತ ಸುರಕ್ಷತೆ ಆರೋಗ್ಯದ ಪ್ರಮುಖ ಭಾಗ. ಹಲ್ಲುಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ದೇಹದ ಸ್ವಚ್ಚತೆ ಹಾಗೂ ಬಾಯಿಯ ಸ್ವಚ್ಚತೆ ಮುಖ್ಯ ಪಾತ್ರವಹಿಸುತ್ತದೆ ಎಂಬುದಾಗಿ ದಂತ ವೈದ್ಯೆಯಾದ ಚಂದ್ರಕಲಾ ಅವರು ಹೇಳಿದರು.
ನಗರದ ದೇವರಾಜ ಅರಸು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ದಂತ ತಪಾಸಣೆ ಹಾಗೂ ಸುರಕ್ಷತೆಯ ಬಗ್ಗೆ ಇನ್ನರ್ ವೀಲ್ಹ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನುಷ್ಯ ದಿನಕ್ಕೆ ಎರಡು ಬಾರಿ ಹಲ್ಲುಗಳು ಬರುತ್ತವೆ. ಹುಟ್ಟಿನಿಂದ 7ತಿಂಗಳಿನಂದ ಬರುವ ಹಾಲು ಹಲ್ಲುಗಳು ನಂತರ 13 ವರ್ಷದಿಂದ ಬರುವ ಹಲ್ಲುಗಳು ಈ ಹಲ್ಲುಗಳು ಶಾಶ್ವತ ಹಲ್ಲುಗಳು ಇವುಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಮತಿ ರೋಷಣಿ ಮಹೇಶ್, ಕಾರ್ಯದರ್ಶಿ ಶ್ರೀಮತಿ ಸರ್ವಮಂಗಳರಮೇಶ್, ಶ್ರೀಮತಿ ಸುವರ್ಣಪ್ರಶಾಂತ್, ಶ್ರೀಮತಿ ಪ್ರೇಮ, ಪದ್ಮಮಂಜೇಶ, ಶ್ರೀಮತಿ ತ್ರಿವೇಣಿಶಶಿಧರ್, ಶ್ರೀಮತಿ ಇಂಪಾರಿತೇಶ್ , ಪದ್ಮಾನಂದ್, ಹಾಗೂ ವಾರ್ಡನ್ ಹೇಮಾ, ಶೋಭಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

