March 5, 2026
00001

ಹಿರಿಯೂರು:

ಬೇಡಿ ಬಂದವರಿಗೆ ಎಂದೂ ಬರಿಗೈಯಲ್ಲಿ ಕಳಿಸದ ದಾನಿ ಎಸ್.ಎಸ್.ದಾವಣಗೆರೆಯನ್ನು ಶಿವಶಂಕರಪ್ಪನವರ ಹೆಸರು ಇಲ್ಲದೆ ಊಹಿಸಿಕೊಳ್ಳಲು ಆಗದು. ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಉದ್ಯಮಗಳ ಮೂಲಕ ಸಾವಿರಾರು ಯುವಕರಿಗೆ ಉದ್ಯಮ ದೊರಕಿಸಿಕೊಟ್ಟಿರುವ ಕಲ್ಪವೃಕ್ಷ  ಎಂಬುದಾಗಿ  ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷರಾದ ಠ್ ಉಮೇಶ್  ಗುಡಾಣಮಠ್ ಅವರು ಹೇಳಿದರು.

ನಗರದ ಶ್ರೀ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ವೀರಶೈವ –ಲಿಂಗಾಯತ ಸಮಾಜದ ಅಗ್ರಗಣ್ಯ ನಾಯಕರಾದ  ಶಾಮನೂರುಶಿವಶಂಕರಪ್ಪ ಅವರ ನಿಧನಕ್ಕೆ ಅಖಿಲ ಭಾರತ  ವೀರಶೈವ ಮಹಾಸಭಾದ  ತಾಲ್ಲೂಕು ಘಟಕದ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಅವರು ನಡೆಸಿದ ಪ್ರಯತ್ನಗಳು ಮಹಾಸಭಾದ ನೇತೃತ್ವವನ್ನು ಮುಂದೆ ವಹಿಸಿಕೊಳ್ಳುವವರಿಗೆ ಮಾರ್ಗದರ್ಶನ ನೀಡಲಿವೆ ಎಂಬುದಾಗಿ ಅವರು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರಸಾದ್, ಅರುಣಕುಮಾರ್, ಪರಮೇಶ್, ತಿಪ್ಪೇರುದ್ರಸ್ವಾಮಿ, ಪ್ರದೀಪ್, ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *