
ಹಿರಿಯೂರು:
ನಗರದ ನಗರಸಭೆಯ 2026-27 ನೇ ಸಾಲಿನ ಆಯವ್ಯಯ ತಯಾರಿ ಬಗ್ಗೆ ಸಾರ್ವಜನಿಕ ಸಲಹಾ ಸೂಚನಾ ಸಭೆಯನ್ನು ನಗರಸಭೆ ಆಡಳಿತಾಧಿಕಾರಿಗಳು, ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 2ರಂದು ಬೆಳಗ್ಗೆ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಗರದ ಗಣ್ಯ ವ್ಯಕ್ತಿಗಳು, ವರ್ತಕರು, ಹಿರಿಯನಾಗರೀಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಿವೃತ‍್ತ ಅಧಿಕಾರಿ, ನೌಕರರು, ಪತ್ರಕರ್ತರು, ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ಲಿಖಿತರೂಪದಲ್ಲಿ ನೀಡಬೇಕು ಎಂಬುದಾಗಿ ಅವರು ತಿಳಿಸಿದ್ದಾರೆ.
