March 2, 2026
01

ಹಿರಿಯೂರು:

ತಾಲ್ಲೂಕಿನ ಬಬ್ಬೂರು ಫಾರಂ ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಡಿಸೆಂಬರ್ 8 ಮತ್ತು 9ರಂದು ಆರೋಗ್ಯಕರ ಹಾಲಿನ ಉತ್ಪನ್ನಗಳು, ಗೃಹ ಅಲಂಕಾರಿಕ ವಸ್ತುಗಳು ಹಾಗೂ ಆದಾಯೋತ್ಪನ್ನ  ವಸ್ತುಗಳ ತಯಾರಿಕೆ ಕುರಿತು ಎರಡು  ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯಲ್ಲಿ ಭಾಗವಹಿಸುವ ಇಚ್ಚೆವುಳ್ಳವರು ತರಬೇತಿ ಶುಲ್ಕವಾಗಿ  500ರೂಗಳನ್ನು ಪಾವತಿಸಿ, ಡಿಸೆಂಬರ್ 6ರೊಳಗೆ ದೂರವಾಣಿ ಸಂಖ್ಯೆ 9986647124 ಮೂಲಕ ಅಥವಾ ಹಿರಿಯೂರು ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಜೆ.ಎಂ.ಸರಸ್ವತಿ ಅವರ ಕಚೇರಿಗೆ ಸಂಪರ್ಕಿಸುವ ಮೂಲಕ  ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಮೊದಲು ನೊಂದಾಯಿಸಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶಿಬಿರಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ  ಹಿರಿಯೂರಿನ ಬಬ್ಬೂರುಫಾರಂ ಕೃಷಿ ವಿಜ್ಞಾನ ಕೇಂದ್ರದ  ಗೃಹ ವಿಜ್ಞಾನಿ  ಡಾ.ಜೆ.ಎಂ.ಸರಸ್ವತಿ ಅವರ ದೂರವಾಣಿ ಸಂಖ್ಯೆ 9986647124 ಗೆ  ಸಂಪರ್ಕಿಸಬಹುದಾಗಿದೆ.

About The Author

Leave a Reply

Your email address will not be published. Required fields are marked *