March 2, 2026
0000000007

ಹಿರಿಯೂರು:

ಕನ್ನಡ ನಾಡು ಹಾಗೂ ನುಡಿಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು-ನುಡಿಯನ್ನು ಶ್ರೀಮಂತಗೊಳಿಸುವಲ್ಲಿ ಹಲವಾರು ಸಾಹಿತಿಗಳು, ಕವಿಗಳು ಕನ್ನಡಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ, ಇಂತಹ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕನ್ನಡಿಗರಾದ ನಾವೆಲ್ಲರೂ ಮಾಡಬೇಕಿದೆ ಎಂಬುದಾಗಿ ಮನವಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾನಸ ಮಂಜುನಾಥ್ ಹೇಳಿದರು.

ನಗರದ ವೇದಾವತಿ ನಗರದ ಚಳ್ಳಕೆರೆ ರಸ್ತೆ ಆಂಜನೇಯಸ್ವಾಮಿ ದೇವಸ್ಥಾನದ  ಆಟೋ ಸ್ಟಾಂಡ್ ಹತ್ತಿರ ಮನವಿ ಟ್ರಸ್ಟ್ ಮತ್ತು ಕೆಚ್ಚೆದೆಯ ಕನ್ನಡಿಗ ಯುವಕ ಸಂಘ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ರಾಮಕೃಷ್ಣ, ಗೌರವಧ್ಯಕ್ಷರಾದ ಬಸವರಾಜ್, ಹಿರಿಯ ನಾಗರಿಕರಾದ ಸಣ್ಣಈರಪ್ಪ, ದಲಿತ ಸಂಘದ ಹೋರಾಟಗಾರರಾದದ ಕೆ.ಪಿ. ಶ್ರೀನಿವಾಸ್, ನೀರಾವರಿ ಹೋರಾಟಗಾರರಾದ ಕಸವನಹಳ್ಳಿರಮೇಶ್,  ವಾಣಿಕಾಲೇಜು ಪ್ರೊ.ಧರಣೇಂದ್ರಯ್ಯ, ಆಟೋ ಚಾಲಕ ನಿಜಲಿಂಗಪ್ಪ, .ಕೆಜಿ. ವೆಂಕಟೇಶ್, ನಗರದ ಶಾಲಾ ಮುಖ್ಯ ಶಿಕ್ಷಕರಾದ ರಮೇಶ್, ಸಕ್ಕರೆ ಕಾರ್ಖಾನೆ ದೈಹಿಕ ಶಿಕ್ಷಕರು ಮಹೇಶ್,  ಭಾರತ್, ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣರಾವ್,  ಕಾಂಗ್ರೆಸ್ ಮುಖಂಡರಾದ ಪ್ರದೀಪ್,  ಇಂದ್ರಮ್ಮ, ಹಾಲಿನ ತಿಪ್ಪೇಸ್ವಾಮಿ, ಶ್ರೀದೇವಿ ಸ್ಟೋರ್ ತಿಪ್ಪೇಸ್ವಾಮಿ,  ಕೃಷ್ಣಮೂರ್ತಿ, ಮಂಜಣ್ಣ, ಉಮೇಶ್, ಡಾಬಾ ನವೀನ್,  ಮುರಳಿ,  ಧನುಷ್ ಜಗನ್, ನಿತಿನ್, ಶಾರೂಕ್,  ಪವನ್ ಹಾಗು ವೇದಾವತಿ ನಗರದ ಎಲ್ಲಾ ನಗರದ ಆಟೋ ಚಾಲಕರು ಮತ್ತು ಎಲ್ಲಾ ನಾಗರಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *