March 2, 2026
003

ಹಿರಿಯೂರು:

ತಾಲ್ಲೂಕಿನ  ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದ ದಿನದಿಂದ ತಾಲ್ಲೂಕಿನ ಕುಂದಲಗುರ ಲಂಬಾಣಿ ತಾಂಡದ ಹತ್ತಿರ  ರಸ್ತೆಯ ಮೇಲೆ ವಾಣಿವಿಲಾಸ ಸಾಗರ ಜಲಾಶಯದ ಬಲನಾಲದ ನೀರು ಹರಿದು ಸುವರ್ಣಮುಖಿ ನದಿಗೆ ಸೇರುತ್ತಿದೆ ಎಂಬುದಾಗಿ ಸಾಮಾಜಿಕಕಾರ್ಯಕರ್ತರಾದ ರಾಮಚಂದ್ರ ಕಸವನಹಳ್ಳಿ ತಿಳಿಸಿದ್ದಾರೆ.

ರಸ್ತೆಯ ಮೇಲೆ ಹದಿನೈದು ದಿನಗಳಿಂದ ನೀರು ಹರಿಯುತ್ತಿದ್ದು, ಇಲ್ಲಿ ಚಿಕ್ಕದೊಂದು ನೆಲಮಟ್ಟದ ಸೇತುವೆ ಇದೆ. ಇದರ ಮೇಲೆ ಪಾಚಿ ಕಟ್ಟಿದ್ದು, ಕುಂದಲಗುರ ಹಾಗೂ ಲಂಬಾಣಿ ತಾಂಡಾದ ವೃದ್ಧರು, ಅಂಗವಿಕಲರು, ವಿದ್ಯಾರ್ಥಿಗಳು, ಮಹಿಳೆಯರು ಮಕ್ಕಳು ರೈತರು ಓಡಾಡುವಾಗ ನೀರಿನಲ್ಲಿ ಕಟ್ಟಿರುವ ಪಾಚಿಯಿಂದ ಜಾರಿಬಿದ್ದಿದ್ದಾರೆ.

ದ್ವಿಚಕ್ರ ವಾಹನಗಳು ಜಾರಿ ಬೀಳುತ್ತವೆ. ಅಲ್ಲದೆ ಹೆಚ್ಚುವರಿ ಮಳೆಯಾದಾಗ ಮಳೆಗಾಲದಲ್ಲಿಯು ಈ ರಸ್ತೆ ಮೇಲೆ ನೀರು ಹರಿಯುತ್ತದೆ.ಆದ್ದರಿಂದ ಸಂಬಂದಪಟ್ಟ ಇಲಾಖೆಯವರು ಈ ಜಾಗದಲ್ಲಿ ಒಂದು ಸೇತುವೆ ನಿರ್ಮಿಸಿ ಕೊಡಬೇಕೆಂದು ಸಾಮಾಜಿಕಕಾರ್ಯಕರ್ತರಾದ ರಾಮಚಂದ್ರ ಕಸವನಹಳ್ಳಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *