April 21, 2026
00004

ಹಿರಿಯೂರು:

ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರು ಇಂದು ಬೆಂಗಳೂರಿನಿಂದ ಭರಮಸಾಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ವೇಳೆ ಮಾರ್ಗ ಮಧ್ಯ ಹಿರಿಯೂರಿನಲ್ಲಿನ ಬಿ.ಜೆ.ಪಿ.   ಕಾರ್ಯಕರ್ತರನ್ನು ಭೇಟಿ  ಮಾಡಿ, ಚರ್ಚಿಸಿದರು ಎಂಬುದಾಗಿ  ಮಂಡಲ ಪ್ರಧಾನ ಕಾರ್ಯದರ್ಶಿಯಾದಂತಹ ಯೋಗೇಶ್ ರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚ ಕಾರ್ಯದರ್ಶಿಯಾದ ಗೋವಿಂದರಾಜ್, ಮಂಡಲ ಎಸ್‌.ಟಿ. ಮೋರ್ಚಾ ಅಧ್ಯಕ್ಷರಾದ ಪ್ರಜ್ವಲ್ ಕೊಟ್ಟಿಗೆ, ಯುವ ಮೋರ್ಚಾ ಉಪಾಧ್ಯಕ್ಷರಾದ ಗೌನಹಳ್ಳಿ  ಸಿದ್ದೇಶ್ ಜಿ.ಸಿ., ಓ.ಬಿ.ಸಿ. ಕಾರ್ಯಕಾರಣಿ ಸದಸ್ಯರಾದ ಮಂಜುರಾವ್, ಶ್ರೀವರಿ, ಪ್ರಜ್ವಲ್, ಮಂಜು, ತ್ಯಾಗರಾಜ್, ಹನುಮಂತಪ್ಪ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ  ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ವೈ. ವಿಜೇಯೇಂದ್ರರವರು ಮಾತನಾಡಿ, ಬಿ.ಜೆ.ಪಿ.ಪಕ್ಷವನ್ನು ಬೆಂಬಲಿಸುವ ಜೊತೆಗೆ ಪಕ್ಷದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ  ಕಾರ್ಯಕರ್ತರ ಬೆಂಬಲಕ್ಕೆ ಸದಾ ನಿಲ್ಲುತ್ತೇನೆ ಎಂಬುದಾಗಿ ಅವರು ಭರವಸೆಯನ್ನು ನೀಡಿದರು.

About The Author

Leave a Reply

Your email address will not be published. Required fields are marked *