March 3, 2026
03

ಹಿರಿಯೂರು:

ಹಿರಿಯೂರು ಉಪವಿಭಾಗವ್ಯಾಪ್ತಿಯ,ಭರಂಗಿರಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ  ಎಫ್-10 ಐಮಂಗಲ ವಾಟರ್ ಸಫ್ಲೆ11ಕೆ.ವಿ. ಮಾರ್ಗದ ಎಕ್ಸ್ ಪ್ರೆಸ್ ಫೀಡರ್ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಭರಂಗಿರಿ 66/11 ವಿದ್ಯುತ್  ವಿತರಣಾ ಕೇಂದ್ರದ ಈ ಕೆಳಕಂಡ 11ಕೆ.ವಿ. ಮಾರ್ಗಗಳಿಗೆ ಅಕ್ಟೋಬರ್ 26ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಇರುವುದಿಲ್ಲ ಎಂಬುದಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತಾಲ್ಲೂಕಿನ ಕುರುಬರಹಳ್ಳಿ, ಅಮ್ಮನಹಟ್ಟಿ, ವಿ.ವಿ.ಪುರ, ತಳವಾರಹಟ್ಟಿ, ಬೆಳಗಟ್ಟ, ಕೂನಿಕೆರೆಕಾವಲ್, ಎಕರೆನಾಗೇನಹಳ್ಳಿ, ಮೇಕೇನಹಳ್ಳಿ, ಕಕ್ಕಯ್ಯನಹಟ್ಟಿ, ಆಗಳೇರಹಟ್ಟಿ, ಕುಂಟಪ್ಪನಹಟ್ಟಿ ಹಾಗೂ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಮಸ್ಥರು  ಸಹಕರಿಸಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *