
ಹಿರಿಯೂರು :
ನಗರದಿಂದ ಮುಂಜಾನೆ 5:00 ಗಂಟೆಗೆ ಹಿರಿಯೂರ್ ಟು ಬೆಂಗಳೂರು ನಾನ್ ಸ್ಟಾಪ್ ಬಸ್ಸು ಶುರುವಾಗಿದೆ. ಈ ಬಸ್ಸು ಗಾಂಧಿ ಸರ್ಕಲ್ ಗೆ 4.45 ಕ್ಕೆ ಬಂದು ಸರ್ಕಾರಿ ಬಸ್ ನಿಲ್ದಾಣ ವನ್ನು 5:00 ಗಂಟೆಗೆ ಬಿಡುತ್ತದೆ ಎಂಬುದಾಗಿ ಹಿರಿಯೂರು ಕೆ.ಎಸ್.ಆರ್.ಟಿ.ಸಿ ಮುಖ್ಯಸ್ಥರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ರಜೆ ನಿಮಿತ್ತ ಊರಿಗೆ ಬಂದು ಹಿರಿಯೂರಿನಿಂದ ಬೆಂಗಳೂರಿಗೆ ಕೆಲಸದ ವೇಳೆಗೆ ಸರಿಯಾಗಿ ತಲುಪಬೇಕೆನ್ನುವ ಸಾರ್ವಜನಿಕರು ಬೆಳಗಿನ ಜಾವ ಈ ಬಸ್ಸಿನ ಸೌಲಭ್ಯ ಪಡೆದುಕೊಳ್ಳುವ ಮೂಲಕ ಸಮಯಕ್ಕೆ ಸರಿಯಾಗಿ ಉದ್ಯೋಗಕ್ಕೆ ಹಾಜರಾಗಬಹುದು ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

