
ಹಿರಿಯೂರು :
ಸತ್ಯ ಹಾಗೂ ಅಹಿಂಸೆಯ ಮೂಲಕ ದೇಶದ ಸ್ವತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ದೇಶಾಭಿಮಾನ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬುದಾಗಿ ಮುಖಂಡರಾದ ಬೀಡಬಾಬು ಹೇಳಿದರು.
ವೇದಾವತಿ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ವೇದಾವತಿ ನಗರ ನಾಗರೀಕ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬೀಡಬಾಬು, ಭಾಷಾ ರಫಿ, ತಿಪ್ಪೇಸ್ವಾಮಿ, ಅಮೀರ್ ಜಾನ್ ಶ್ರೀನಿವಾಸ್, ಹೇಮರೆಡ್ಡಿ, ಸಾಧಿಕ್, ಶಾಜು ಇತರರು ಉಪಸ್ಥಿತರಿದ್ದರು.
