October 6, 2026
00002

ಹಿರಿಯೂರು :

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉದಯವಾಗಲಿದೆ ಎಂಬುದಾಗಿ ರಾಜ್ಯ ಅಧ್ಯಕ್ಷರಾದ ಶ್ರೀ ಮಾರಸಂದ್ರ ಮುನಿಯಪ್ಪರವರು ಹೇಳಿದರು.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಗ್ರ್ಯಾಂಡ್ ಪಾರ್ಟಿ ಹಾಲ್ ನಲ್ಲಿ ನಡೆದ ಹಿರಿಯೂರು ತಾಲ್ಲೂಕು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಈಗಾಗಲೇ ರೈತ,ದಲಿತ ,ಕಾರ್ಮಿಕ ಮತ್ತು ಕನ್ನಡಪರ ಇರುವ ಹಲವಾರು ರಾಜ್ಯ ಸಂಘಟನೆಗಳು ಹಾಗೂ ಹತ್ತಕ್ಕೂ ಹೆಚ್ಚು ಮಾಜಿ ಶಾಸಕರು ಮೂರಕ್ಕೂ ಹೆಚ್ಚು ಮಾಜಿ ಸಂಸದರು ನಮ್ಮ ಸಂಪರ್ಕದಲ್ಲಿದ್ದು ಮುಂಬರುವ ದಿನಗಳಲ್ಲಿ ನಮ್ಮ ಕೈ ಬಲಪಡಿಸುತ್ತಿದ್ದಾರೆ.

ಅದರಂತೇ ಹಿರಿಯೂರು ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷವೂ ಸ್ಪರ್ಧೆ ಮಾಡಲಿದ್ದು ಸಾಮಾಜಿಕ ಹೋರಾಟಗಾರರಾದ ಕೆ.ಪಿ.ಶ್ರೀನಿವಾಸ್ ರವರು ಅಭ್ಯರ್ಥಿಯಾಗಲಿದ್ದು, ತಾಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಮತಗಳು ಕೆ.ಪಿ.ಶ್ರೀನಿವಾಸ್ ರವರಿಗೆ ಸಿಗಬೇಕು,

ಈ ಬಾರಿ ಅಭಿವೃದ್ಧಿ ವಿಚಾರವಾಗಿ ಬದಲಾವಣೆ ಬಯಸಿರುವ ಹಿನ್ನೆಲೆಯಲ್ಲಿ  ಡಾ:ಬಿ.ಆರ್ .ಅಂಬೇಡ್ಕರ್ ಕಾನ್ಷೀರಾಂ,ಪ್ರೊ.ಬಿ.ಕೃಷ್ಣಪ್ಪನವರ ಸಿದ್ದಾಂತ ಒಳಗೊಂಡಿರುವ, ಈ ಪಕ್ಷಕ್ಕೆ ಗೆಲುವು ಸಾಧ್ಯತೆ ಇರುವುದರಿಂದ  ಕಾರ್ಯಕರ್ತರು ಇಂದಿನಿಂದಲೇ ತಾಲೂಕಿನ ಎಲ್ಲಾ ಬೂತ್ ಗಳಲ್ಲಿ ಚಟುವಟಿಕೆಗಳಲ್ಲಿ ತೊಡಗುವಂತೆ ಕಾರ್ಯಕರ್ತರುಗಳಿಗೆ ಹೇಳಿದರು.

ಇದೇ ಸಂದರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಯಾಗಿ ಹಿರಿಯೂರಿನ ಕೆ.ಪಿ.ಶ್ರೀನಿವಾಸ್ ರವರನ್ನು ಘೋಷಣೆ ಮಾಡಿದರು, ವಿಶೇಷ ಕಾರ್ಯಕರ್ತರ ಸಭೆಯನ್ನು ತಾಲ್ಲೂಕು ಅಧ್ಯಕ್ಷರಾದ ಜಗದೀಶ್ ಅಬ್ಬಿನಹೊಳೆ ಅಧ್ಯಕ್ಷತೆಯಲ್ಲಿ ನಡೆಸಲಾಯಿತು,

ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಭೀಮನಕೆರೆ ಶಿವಮೂರ್ತಿ,ಲಕ್ಷ್ಮಮ್ಮ,ನವೀದ್,ಜಿಲ್ಲಾ ಸಂಯೋಜಕರಾದ ಕೆ.ಪಿ.ಶ್ರೀನಿವಾಸ್, ಜಿಲ್ಲಾಧ್ಯಕ್ಷರಾದ ಎನ್ .ಪ್ರಕಾಶ್, ಚಿತ್ರದುರ್ಗ ನಗರ ಘಟಕದ ಅಧ್ಯಕ್ಷರಾದ ಮಂಜುನಾಥ್ ಎ ತಾಳಿಕೆರೆ, ತುಮಕೂರು ಜಿಲ್ಲಾಧ್ಯಕ್ಷರಾದ ಭರತ್ ಕುಮಾರ್ ,ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ ಜಿಲ್ಲಾ ಉಪಾಧ್ಯಕ್ಷರಾದ ಮಹಾಲಿಂಗಪ್ಪ ಉಪ್ಪಳಗೆರೆ, ದೇವೇಗೌಡ ಬಿದರಕೆರೆ ತಾಲ್ಲೂಕು ಉಸ್ತುವಾರಿ ರಾಘವೇಂದ್ರ ಈಶ್ವರಗೆರೆ, ತಾಲ್ಲೂಕು ಉಪಾಧ್ಯಕ್ಷರಾದ ಚಂದ್ರಣ್ಣ ಎಂಡಿ ಕೋಟೆ ತಾಲೂಕು ಖಜಾಂಚಿ ಗಳಾದ ರಂಗಸ್ವಾಮಿ ಹುಚ್ಚವ್ವನಹಳ್ಳಿ,  ಕಾರ್ಯದರ್ಶಿಗಳಾದ ರಾಜು ದೇವರ ಕೊಟ್ಟ,ಮಹೇಶ್ ಕಾಟನಾಯಕನಹಳ್ಳಿ ಕದುರಪ್ಪ ಶಿಡ್ಲಯನಕೋಟೆ ,ಮೈಗಣ್ಣ ಲಕ್ಷ್ಮಿಕಾಂತ್ ನಗರ ಘಟಕದ ಅಧ್ಯಕ್ಷರಾದ ರಾಘವೇಂದ್ರ ಹಿರಿಯೂರು, ಯುವ ಕಲಾವಿದರಾದ ಮಾರುತೇಶ್ ಕೂನಿಕೆರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *