
ಹಿರಿಯೂರು :
ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏನೋ ಕಾಂಗ್ರೆಸ್ ಪಕ್ಷ ಮಾಡಬಾರದನ್ನ ಮಾಡಿ, ಮಹಿಳೆಯರಿಗೆ ಮೋಸ ಮಾಡಿದೆ ಎಂದು ಆರೋಪ ಮಾಡುತ್ತಿದ್ದು, ಇದು ನಿಜಕ್ಕೂ ಖಂಡನೀಯ ಎಂಬುದಾಗಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವರಂಜಿನಿಯಾದವ್ ಆಗ್ರಹಿಸಿದ್ದಾರೆ.
ಕಳೆದ 2023ರಲ್ಲಿ ಸರ್ವಾನು ಮತದಿಂದ ಅನುಮೋದನೆಗೊಂಡ ಮಹಿಳಾ ಮೀಸಲಾತಿಯನ್ನು ಜಾರಿಗೆ ಮಾಡುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಬಿಜೆಪಿ ಸರ್ಕಾರಕ್ಕೆ ಮಹಿಳಾ ಮೀಸಲಾತಿ ಜಾರಿ ಮಾಡಬೇಕೆಂಬ ಕಾಳಜಿ ಇಲ್ಲ, ಕೇವಲ ನೆಪಕ್ಕೆ ಮಾತ್ರ ಕ್ಷೇತ್ರ ಮರುವಿಂಗಡಣೆ ನೆಪದಲ್ಲಿ ಮಹಿಳಾ ಮೀಸಲಾತಿಯನ್ನು ತಳುಕು ಹಾಕುತ್ತಿದೆ.
ಬಿಜೆಪಿ ಸರ್ಕಾರ ವಿವಾದ ಮತ್ತು ಗೊಂದಲಕ್ಕೆ ಎಡೆ ಮಾಡಿಕೊಡುವಂತಹ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಮುಂದಿಟ್ಟುಕೊಂಡು ಮಹಿಳಾ ಮೀಸಲಾತಿಯನ್ನು ಮೂಲೆಗುಂಪು ಮಾಡಿ, ಅದನ್ನು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವುದು ಬಿಜೆಪಿಯ ಕುತಂತ್ರ ನೀತಿಯಾಗಿದೆ ಎಂಬುದಾಗಿ ಅವರು ಆಪಾದಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿಯನ್ನು ವಿರೋಧಿಸುವುದಕ್ಕಾಗಿ ಕ್ಷೇತ್ರ ಮರವಿಂಗಡನೆ ಮಸೂದೆ ನೆಪದಲ್ಲಿ ಮಹಿಳಾ ಮೀಸಲಾತಿಯನ್ನು ಮುನ್ನೆಲೆಗೆ ತರಲಾಗಿದೆ ಅಷ್ಟೇ, ಇದೊಂದು ಬಿಜೆಪಿ ಪಕ್ಷದ ರಾಜಕೀಯ ಕುತಂತ್ರದ ಭಾಗವಾಗಿದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
