
ಹಿರಿಯೂರು :
ದಿವಂಗತ ಕೆ.ಟಿ.ರಾಮಶೆಟ್ಟಿ ಮತ್ತು ಪಾರ್ವತಮ್ಮ ದಂಪತಿಗಳ ಪುತ್ರ ಆರ್.ಪ್ರಕಾಶ್ ಕುಮಾರ್ ರವರು ಆರ್ಯವೈಶ್ಯ ಸಮಾಜದ ಮುಖಂಡರಾಗಿದ್ದು, ಹಲವಾರು ಸಂಘ-ಸಂಸ್ಥೆಗಳ ಮೂಲಕ ಸಮಾಜದ ಜನರಿಗಾಗಿ ಅನನ್ಯ ಸೇವೆ ಮಾಡುತ್ತಾ ಬಂದಿದ್ದು, ಇವರ ಸೇವೆಯನ್ನು ಗುರುತಿಸಿ, ಇವರಿಗೆ ನಮ್ಮ ವಾಸವಿ ಅದೃಷ್ಟ ಬಳಗದಿಂದ ವಾಸವಿ ಸೇವಾ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂಬುದಾಗಿ ವಾಸವಿ ಅದೃಷ್ಟ ಬಳಗ ಅಧ್ಯಕ್ಷ ಬಾಲಾಜಿ ಹೇಳಿದರು.
ನಗರದ ಕನ್ನಿಕಾ ಮಹಲ್ ನಲ್ಲಿ ವಾಸವಿ ಜಯಂತಿಯ ಪ್ರಯುಕ್ತ ಆರ್ಯವೈಶ್ಯಮಂಡಳಿ, ವಾಸವಿ ಅದೃಷ್ಟನಿಧಿ ಬಳಗ ಹಾಗೂ ವಾಸವಿ ಯುವಜನಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಸವಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದೇ ಸಾವಿನ ಮನೆಯಲ್ಲಿ ಇವರು ಮುಂದೆ ಇದ್ದು, ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಸುತ್ತಾ ಜನಮನ ಮೆಚ್ಚಿದ ವ್ಯಕ್ತಿಯಾಗಿದ್ದಾರೆ, ಇವರು 1500 ಕ್ಕಿಂತ ಹೆಚ್ಚಿನ ಮೃತರ ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಂಡು ನೊಂದವರ ದುಃಖದಲ್ಲಿ ಸಹಭಾಗಿಯಾಗಿ ಮುಂದೆ ನಿಂತು ಸಮಾಜಸೇವೆ ಮಾಡಿಕೊಂಡು ಬಂದಿದ್ದಾರೆ, ಸಮಾಜಮುಖಿ ಕೆಲಸ ನಿರ್ವಹಿಸುವ ಸೇವಾನಿರತ ವಾಸವಿ ಸೇವಾರತ್ನ 2026 ರ ಪ್ರಶಸ್ತಿಪತ್ರ ನೀಡಿ, ಗೌರವಿಸಲಾಗುತ್ತಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಸತ್ಯನಾರಾಯಣ್, ಉಪಾಧ್ಯಕ್ಷ ಕೆ.ವಿ.ಅಮರೇಶ್, ಕಾರ್ಯದರ್ಶಿ ಪಿ.ವಿ.ನಾಗರಾಜ್, ವಾಸವಿ ಅದೃಷ್ಟ ಬಳಗ ಅಧ್ಯಕ್ಷ ಬಾಲಾಜಿ ಮತ್ತು ತಂಡ, ವಾಸವಿಯುವಜನಸಂಘದ ಅಧ್ಯಕ್ಷರಾದ ಜಗದೀಶ್ ಮತ್ತು ತಂಡದವರು ಹಾಗೂ ಆರ್ಯವೈಶ್ಯ ಕುಲಬಾಂಧವರು ಭಾಗವಹಿಸಿದ್ದರು.
