April 16, 2026
0002

ಹಿರಿಯೂರು :

ಸಮಾಜದ ಸರ್ವಸಮುದಾಯಗಳಿಗೆ ಮೂಲಭೂತ ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನ್ ರಾಂ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂಬುದಾಗಿ ರಾಜ್ಯ ಬೆಂಗಳೂರು ವಿಭಾಗ ಪ್ರಧಾನ ಸಂಚಾಲಕರಾದ ಹೆಗ್ಗೆರೆ ಮಂಜುನಾಥ್ ಹೇಳಿದರು.

ನಗರದ 30ನೇ ವಾರ್ಡ್ ಹರಿಶ್ಚಂದ್ರ ಘಾಟ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಹಿರಿಯೂರು ತಾಲೂಕು ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ 135 ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಬೆಂಗಳೂರು ವಿಭಾಗ ಪ್ರಧಾನ ಸಂಚಾಲಕರಾದ ಹೆಗ್ಗೆರೆ ಮಂಜುನಾಥ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾದ ಕೆಂಚಮ್ಮ, ಸಿದ್ದಮ್ಮ, ಶಾರದಮ್ಮ, ಮುಖಂಡರಾದ ಮೂರ್ತಪ್ಪ, ಪ್ರಭು, ಸೇರಿದಂತೆ ಅನೇಕ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *