
ಹಿರಿಯೂರು :
ಇಂದು ನಿರುದ್ಯೋಗಿಗಳು ದಂಗೆ ಎದ್ದಿರುವ ಕಾಲದಲ್ಲಿ ಒಂದಿಷ್ಟು ನಮ್ಮ ಭಾಗದ ಯುವಕರಿಗೆ ಉದ್ಯೋಗವನ್ನು ಕೊಡಿಸಬೇಕೆಂಬ ನಿಟ್ಟಿನಲ್ಲಿ ಪ್ರತಿಷ್ಠಿತ ಎಂಟು ಕಂಪನಿಗಳಾದ ಟಾಟಾ ಎಲೆಕ್ಟ್ರಾನಿಕ್ ಪ್ರೈ.ಲಿ. ಸರ್ವಿಂಗ್ ಎಡ್ಜ್ ಪ್ರೈ.ಲಿ., ಜಿ.ಆರ್. ಮ್ಯಾಜೇಜ್‌ಮೆಂಟ್ ಸಲೂಷನ್, ಮಸಾಸಿ ಆಟೋ ಪಾರ್ಟ್ಸ್ ಪ್ರೈ.ಲಿ. ಮಾಕ್ಸ್ ಎನ್ ಟ್ರಕ್ಸ್, ಹೆಚ್.ಆರ್.ಸೈಕ್ಟರ್ಯು, ಕಂಪನಿಗಳನ್ನು ಕರೆಸಿ, ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ ಎಂಬುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸೆಲ್, ಹಾಗೂ ಪಿ.ಎಂ.ಉಷಾ ಯೋಜನೆ ಸಾಫ್ಟ್ ಕಾಂಪೊನೆಂಟ್ ಕಾರ್ಯಕ್ರಮ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಬೆಂಗಳೂರಿನ ಮಾನವ ಅಭಿವೃದ್ಧಿ ಮ್ಯಾನೇಜರ್ ಎ.ಮನ್ಮಥರವರು ಮಾತನಾಡಿ, ಉದ್ಯೋಗಗಳು ಲಕ್ಷಾಂತರ ಇವೆ. ಯುವಕರಲ್ಲಿ ಕಂಪ್ಯೂಟರ್ ಜ್ಞಾನ, ವಿವಿಧ ಉದ್ಯೋಗಾಧಾರಿತ ಕೌಶಲ್ಯಗಳು ಇದ್ದರೆ
ಉತ್ತಮ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಿ, ಇಂದು ಸಂಜೆ ಉದ್ಯೋಗ ಪ್ರಮಾಣ ಪತ್ರಗಳನ್ನು ಪ್ರಾಂಶುಪಾಲರ ಕಡೆ ನೀಡುತ್ತೇವೆ ಎಂಬುದಾಗಿ ಹೇಳಿದರು.

ಪಿ.ಎಂ. ಉಷಾ ವಿಭಾಗದ ಸಂಚಾಲಕರಾದ ಡಾ. ಎ.ದೇವಿಕ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶಯದಂತೆ ಪದವಿ ಪಡೆದ ಯುವಕರಿಗೆ ಉದ್ಯೋಗವನ್ನು ವಿವಿಧ ಕಂಪನಿಗಳಲ್ಲಿ ಕೊಡಿಸುವ ಕೆಲಸವನ್ನು ಕಾಲೇಜು ಮಾಡುತ್ತದೆ ಎಂಬುದಾಗಿ ತಿಳಿಸಿದರು.
ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಅಧಿಕಾರಿ ಭರತ್ ಬಿ.ಟಿ. ಮಾತನಾಡಿ, ಈಗಾಗಲೇ ಬಿ.ಇ.,ಎಂ.ಕಾಂ, .ಎಸ್ಸಿ., ಬಿ.ಎ., ಬಿ.ಕಾಂ., ಎಂ.ಎಸ್.ಡಬ್ಲ್ಯೂ, ಬಿ.ಬಿ.ಎ., ಎಂ.ಬಿ.ಎ. ಮಾಡಿರುವ 170 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಅವರೆಲ್ಲರಿಗೂ ಉದ್ಯೋಗ ನೀಡುವ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕಂಪನಿಗಳ ಸಂಚಾಲಕರಾದ ಪ್ರಶಾಂತ, ಸುಷ್ಮಿತ ಎನ್.ಆರ್, ವಿನೂತ, ಬಾಲರಾಜು, ಸ್ನೇಹ, ಹರ್ಷಿತ, ಐ.ಕ್ಯೂ.ಎ.ಸಿ ಸಂಚಾಲಕರಾದ ಮೊಹಮ್ಮದ್ ಸಾದತ್, ಅಧ್ಯಾಪಕರಾದ ಹೇಮಲತ, ಬಿ.ಆರ್.ಡಾ.ಗಂಗಾಧರ್, ಆರ್.ಬಸವರಾಜು, ಟಿ.ಲಕ್ಷ್ಮಣ್ ನಾಯಕ್, ಆರ್.ವಲಿ, ತಿಪ್ಪೇಶ್, ಮಹಾಲಿಂಗಪ್ಪ, ಶ್ರೀಧರ ಮೂರ್ತಿ, ಡಾ.ರೇಖಾ, ಜಯಶ್ರೀ, ಡಾ.ವೆಂಕಟೇಶ್, ಮಂಜುನಾಥ್, ಕಛೇರಿ ಮೇಲ್ವಿಚಾರಕರಾದ ಪಿ.ಎನ್.ನರಸಿಂಹಮೂರ್ತಿ, ಉಪಸ್ಥಿತರಿದ್ದರು.

ಆರಂಭದಲ್ಲಿ ಡಾ.ಎಸ್.ಎನ್. ರಾಜೇಶ್ವರಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಕೆ.ಹೆಚ್.ಮಹಂತೇಶ್ ಸ್ವಾಗತಿಸಿದರು. ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕರಾದ ಎಸ್.ಎಲ್.ಎನ್.ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರಾದ ಜಿ.ಎಸ್.ರಾಮಪ್ಪ ಕಾರ್ಯಕ್ರಮ ನಿರ್ವಹಿಸಿದರು.
