April 17, 2026
0005

ಹಿರಿಯೂರು:

ರಾಜ್ಯ ಸರ್ಕಾರ 56,432ಖಾಲಿ ಹುದ್ಧೆಗಳನ್ನು ಭರ್ತಿ ಮಾಡಲು ಹೊರಟಿರುವುದು ಸ್ವಾಗತಾರ್ಹ., ಪರಿಶಿಷ್ಟ ಜಾತಿಯ ಶೇಕಡ15ರಷ್ಟು ಮೀಸಲಾತಿಯನ್ನು  ಗ್ರೂಪ್ ಎ., ಬಿ, ಸಿ, ಎಂಬುದಾಗಿ ವರ್ಗೀಕರಿಸಿ, ಒಳಮೀಸಲಾತಿ ಅನ್ವಯವೇ ಈ ಹುದ್ಧೆಗಳನ್ನು ಭರ್ತಿ ಮಾಡಬೇಕು ಎಂಬುದಾಗಿ ನಗರದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧೀವೃತ್ದಲ್ಲಿ  ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ,ತಹಶೀಲ್ದಾರ್ ಎಂ.ಸಿದ್ಧೇಶ್ ಅವರ ಮೂಲಕ  ಮುಖ್ಯಮಂತ್ರಿಗೆ  ಮನವಿ ರವಾನಿಸಲಾಯಿತು.

ಫೆಬ್ರವರಿ26ರ ಸಚಿವ ಸಂಪುಟದ ನಿರ್ಣಯ ಹಾಗೂ ಫೆಬ್ರವರಿ27ರ ಸರ್ಕಾರದ ಆದೇಶದ ಪ್ರಕಾರ 195ರ ನೇಮಕಾತಿ ನಿಯಮದಂತೆ  ಪರಿಶಿಷ್ಟ ಜಾತಿಗೆ ಶೇ15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇಕಡ.3ರಷ್ಟು ಮೀಸಲಾತಿಯೊಂದಿಗೆ ರೋಸ್ಟರ್ ಪ್ರಕಾರ ನೇಮಕಾತಿ ಪ್ರಕ್ರಿಯೆ  ಕೈಗೊಳ್ಳಲು ನಿರ್ಧರಿಸಲಾಗಿದೆ. ಇದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಮಾಡಿರುವ ಅನ್ಯಾಯ ಎಂಬುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾ.ನಾಗಮೋಹನ್ ದಾಸ್  ವರದಿಯ ಆಧಾರದ ಮೆಲೆ ಒಳಮೀಸಲಾತಿಯನ್ನು ಪರಿಶಿಷ್ಟಜಾತಿಯ  ಗ್ರೂಪ್ ಎ, ಬಿ ಮತ್ತು ಸಿ ಎಂಬ ವರ್ಗೀಕರಣದಂತೆ ಜಾರಿಗೊಳಿಸಿ ತಿದ್ದುಪಡಿ ಆದೇಶ ಹೊರಡಿಸಬೇಕು ಎಂಬುದಾಗಿ ಆಗ್ರಹಿಸಿದರು.

ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.56ರಿಂದ ಶೇಕಡ50ಕ್ಕೆ ಇಳಿಸಿರುವ ವಿಚಾರದಲ್ಲಿ ನ್ಯಾಯಾಲಯದ ಮುಂದೆ ಸಂವಿದಾನಾತ್ಮಕ ಹಾಗೂ ಕಾನೂನು ಆಧಾರದ ಮೇಲೆ ಸರ್ಕಾರ ಪ್ರಬಲ ವಾದ  ಮಂಡಿಸಬೇಕು ಎಂಬುದಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.

ಒಳಮೀಸಲಾತಿ ಜಾರಿಯಾಗುವವರೆಗೆ ಸಮಾಜಕಲ್ಯಾಣ ಇಲಾಖೆ ಸಚಿವರಿಗೆ ಬೇರೆ ಖಾತೆ ನೀಡಬೇಕು. ಪ್ರಸ್ತುತ ಇರುವ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳನ್ನು ಬದಲಾಯಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂರಾದ ಕೆ.ರಾಮಚಂದ್ರ, ಬೋರನಕುಂಟೆಜೀವೆಶ್, ಕೆ.ಪಿ.ಶ್ರೀನಿವಾಸ್, ರವಿಘಾಟ್, ಚಂದ್ರುಘಾಟ್, ಎಂ.ಡಿ.ಸಣ್ಣಪ್ಪ, ಹರ್ತಿಕೋಟೆದಯಾನಂದ್, ಶಿವುಖಂಡೇನಹಳ್ಳಿ, ಆರ್.ರಾಘವೇಂದ್ರ,  ಬೋರನಕುಂಟೆ ಕರಿಯಣ್ಣ, ತಿರುಮೂರ್ತಿ, ಕೆ.ಓಂಕಾರಮೂರ್ತಿ, ಬಿ.ಸಿದ್ಧಪ್ಪ, ಖಂಡೇನಹಳ್ಳಿಚಿದಾನಂದ, ಆರ್.ಅಡಿವೆಪ್ಪ, ರವಿಚಂದ್ರನ್, ರಘುನಾಥ್, ಎಸ್.ಪ್ರಕಾಶ್, ಎನ್.ಮಹಾಲಿಂಗಪ್ಪ, ಜಿ.ಎಲ್.ಮೂರ್ತಿ, ಶಿವರಾಜ್, ಡಿ.ಎನ್.ಹನುಂತರಾಯ, ವೈ.ರಮೆಶ್, ಪಿ.ರಮೆಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *