
ಚಿತ್ರದುರ್ಗ :
ನಗರಸಭೆ ಮಾಜಿ ಅಧ್ಯಕ್ಷರಾದ ಹೆಚ್.ಸಿ.ನಿರಂಜನಮೂರ್ತಿಯವರ ತಂದೆಯವರಾದ ನಿವೃತ್ತ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ಚನ್ನಬಸಪ್ಪ ವಯಸ್ಸು 99 ವರ್ಷ, ಇಂದು ಬೆಳಿಗ್ಗೆ 12:55ಕ್ಕೆ ಹೊಳಲ್ಕೆರೆ ರಸ್ತೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ 4 ಪುತ್ರಿಯರು, 3 ಗಂಡು ಮಕ್ಕಳು ಇದ್ದು, ಮೃತರ ಅಂತ್ಯ ಕ್ರಿಯೆಯನ್ನು ಜನವರಿ 18 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂಬುದಾಗಿ ಕುಟುಂಬದ ಮೂಲದವರು ತಿಳಿಸಿದ್ದಾರೆ.
