
ಹಿರಿಯೂರು :
ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವು ಉತ್ತರಾಯಣ ಪುಣ್ಯಕಾಲದ ಆರಂಭವಾಗಿದ್ದು, ಈ ಹಬ್ಬವು ಚಳಿಯನ್ನು ಕಳೆದು ಹೊಸ ಚೈತನ್ಯವನ್ನು ತರುವ ಹಬ್ಬವಾಗಿದ್ದು, ಸಂಕ್ರಾಂತಿಯ ಎಳ್ಳು-ಬೆಲ್ಲದ ಸವಿಯಂತೆ ನಮ್ಮ ಬದುಕಿನಲ್ಲಿ ಸುಖ-ಶಾಂತಿ ನೆಮ್ಮದಿಯ ಹೊಸ ಸಂತಸ-ಸಂಭ್ರಮ ಮನೆಮಾಡಲಿ ಎಂಬುದಾಗಿ ಶ್ರೀಶಾರದಾಶ್ರಮದ ಪರಮಪೂಜ್ಯ ಶ್ರೀಚೈತ್ಯನಮಯಿ ಮಾತಾಜಿ ಹೇಳಿದರು.

ನಗರದ ನಂಜಯ್ಯನಕೊಟ್ಟಿಗೆ ಬಡಾವಣೆಯಲ್ಲಿನ ಒಕ್ಕಲಿಗರ ಸಂಘದ ಹಾಸ್ಟಲ್ ಕಟ್ಟಡದಲ್ಲಿ ಮಹಿಳಾ ಘಟಕದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಂಕ್ರಾಂತಿ-ಸಂಭ್ರಮ” ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಆಶೀರ್ವಚನ ನೀಡಿ, ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಮಹಿಳಾ ಘಟಕದ ಅಧ್ಯಕ್ಷೆ ಮಮತಾಕೃಷ್ಣಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿಮಾನಸಮಂಜುನಾಥ್, ಮಹಿಳಾ ಘಟಕದ ಸದಸ್ಯರುಗಳಾದ ಸೌಭಾಗ್ಯಸೂಗೂರು, ವಾಣಿಮಹಾಲಿಂಗಪ್ಪ, ಛಾಯಾನಾಗೇಂದ್ರಗೌಡ, ಜ್ಞಾನೇಶ್ವರಿತಿಪ್ಪೇಸ್ವಾಮಿ, ಅರುಣಶಿವಣ್ಣ, ಹೇಮಲತಾವಸಂತ್, ಆಲೂರುಗೀತಾ, ಕುಸುಮಪ್ರಸಾದ್, ವನಿತಾಮಂಜುನಾಥ್, ಕುಸುಮಯೋಗೇಶ್, ರಮ್ಯಾರಾಜು, ಕಲ್ಪನಾಶೇಖರ್, ವೀಣಾರಾಧಾಕೃಷ್ಣ, ರಾಜೇಶ್ವರಿಶಾಂತಪ್ಪ, ನೇತ್ರಮಂಜುನಾಥ್, ಪೂಜಾರಂಜಿತ್, ಪ್ರೇಮರಾಜು, ತೇಜಸ್ವಿನಿಪಿಟ್ಲಾಲಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
