April 21, 2026
0001

ಹಿರಿಯೂರು:

ನಗರದ ಚಿಕ್ಕಪೇಟೆಯಲ್ಲಿ ಪುರಾತನ ಕಾಲದಿಂದಲೂ ಐತಿಹಾಸಿಕ ಪ್ರಸಿದ್ಧಿಯಾಗಿ ಕಲ್ಲಿನ ಗುಡಿಯಲ್ಲಿ ನೆಲೆಸಿರುವ ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ನೂತನ ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರೇಶ್ವರಸ್ವಾಮಿ ಪಂಚಲೋಹದ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇದೇ ಜನವರಿ 21ರ ಬುಧವಾರ ನಡೆಯಲಿದೆ ಎಂಬುದಾಗಿ ಕಾರ್ಯಕ್ರಮದ ಸಂಯೋಜಕರು ತಿಳಿಸಿದ್ದಾರೆ.

ಇದರ ಅಂಗವಾಗಿ ಅಂದು ಬೆಳೆಗ್ಗೆ 6 ಗಂಟೆಗೆ ಭದ್ರಕಾಳಿ ಸಮೇತ ಶ್ರೀವೀರಭದ್ರೇಶ್ವರಸ್ವಾಮಿ ನೂತನ ಚರಮೂರ್ತಿ ವಿಗ್ರಹಗಳಿಗೆ ಕೊನಿಕೆರೆ ಗ್ರಾಮದ ಕುನಕಲಗುಂಡಿ ನದಿ ತೀರದಲ್ಲಿ ಗಂಗಾವರಣ ಗಂಗಾ ಪೂಜೆ ಇರುತ್ತದೆ, 11 ಗಂಟೆಯಿಂದ ಕಳಸ ಆರಾಧನೆ ರುದ್ರಹೋಮ ಹೀಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಮಧ್ಯಾಹ್ನ 2 ಗಂಟೆಯಿಂದ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು  ಹಮ್ಮಿಕೊಳ್ಳಲಾಗಿದೆ, ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮೂಲಕ ಪೂಜಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯಕ್ರಮದ ಸಂಯೋಜಕರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *