
ಹಿರಿಯೂರು :
ಡಾ.ಸೋಮಶೇಖರ ಸ್ಮರಣಾರ್ಥವಾಗಿ ನಗರದ ಆಲೂರು ರಸ್ತೆಯಲ್ಲಿರುವ ಬಸವರಾಜ್ ಕಾಲೇಜಿನಲ್ಲಿ ಮೆಗಾ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಬೇಕೆಂದು ತೀರ್ಮಾನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಿಬಿರ ನಡೆಯುವ ದಿನಾಂಕ ಹಾಗೂ ಶಿಬಿರದಲ್ಲಿ ಪಾಲ್ಗೊಳ್ಳುವ ವೈದ್ಯರ ತಂಡದ ವಿವರಗಳನ್ನು ತಿಳಿಸಲಾಗುವುದು ಎಂಬುದಾಗಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಹೇಳಿದರು.
ನಗರದ ಬಸವರಾಜ್ ನರ್ಸಿಂಗ್ ಕಾಲೇಜಿನಲ್ಲಿ ಡಾ.ಸೋಮಶೇಖರ ಸ್ಮರಣಾರ್ಥ ಮೆಗಾ ವೈದ್ಯಕೀಯ ಶಿಬಿರ ನಡೆಸುವ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಭೆಯಲ್ಲಿ ಡಾ.ಮಹಾಲಿಂಗಪ್ಪ, ಡಾ.ಭರತ್ ಡಾ.ಶ್ರೀನಾಥ್, ಕೆ.ಜಿ.ಹನುಮಂತರಾಯ, ಮಂಜುನಾಥ್ ಮಾಳಿಗೆ, ಗಿರೀಶ್ ಹುಚ್ಚುವನಹಳ್ಳಿ, ಲ್ಯಾಬ್ ಟೆಕ್ನಿಷಿಯನ್ ಜಯರಾಮ್, ಅರುಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
