
ಹಿರಿಯೂರು:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುರ್ಚಿ ಕಿತ್ತಾಟ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ. ಹಿಂದಿನ ಬಿ.ಜೆ.ಪಿ. ಸರ್ಕಾರದ ಜನಪರ ಆಡಳಿತವನ್ನು ಜನರು ಸ್ಮರಿಸುತ್ತಿದ್ದು, ಬಿ.ಜೆ.ಪಿ.ಯ ಬಲ ವೃದ‍್ಧಿಸತೊಡಗಿದೆ ಎಂಬುದಾಗಿ ವಿಧಾನಪರಿಷತ್ ಮಾಜಿ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ ಅವರು ಹೇಳಿದರು.
ನಗರದ ಬಿ.ಜೆ.ಪಿ. ಕಚೇರಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಕುರಿತು ಕಾರ್ಯಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಹೇಳಿದರು.

ಜನಪರ ಆಡಳಿತದಿಂದ ಸರ್ಕಾರ ವಿಮುಖವಾಗಿದೆ. ನಿರುದ್ಯೋಗಿಗಳ ಸಮಸ್ಯೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿರುವುದು ಬಿ.ಜೆ.ಪಿ.ಗೆ ವರದಾನವಾಗಿದೆ. ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂಬುದಾಗಿ ವಿಶ್ವಾಸವ್ಯಕ್ತಡಿಸಿದರು.
ಬಿ.ಜೆ.ಪಿ.ತಾಲ್ಲೂಕು ಘಟಕದ ಅಧ್ಯಕ್ಷರಾದ ಕೆ.ಅಭಿನಂದನ್ ಅವರು ಮಾತನಾಡಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದ್ದು, ತಾಲ್ಲೂಕಿನ 33 ಗ್ರಾಮಪಂಚಾಯಿತಿಗಳಿಗೆ ಪ್ರಮುಖರನ್ನು ನೇಮಿಸಿ ಸಂಘಟನೆ ಚುರುಕು ಮಾಡುತ್ತೇನೆ.ವರಿಷ್ಠರ ಸೂಚನೆ ಮೇರೆಗೆ ಯುವಕರಿಗೆ ಹೆಚ್ಚುಪ್ರಾತಿನಿಧ್ಯ ಕೊಡಲಾಗುವುದು ಎಂಬುದಾಗಿ ಅವರು ಹೇಳಿದರು.

ಈ ಸಭೆಯಲ್ಲಿ ಮಾಜಿ ಮಂಡಲಅಧ್ಯಕ್ಷ ವಿಶ್ವನಾಥ್, ಮುಖಂಡರಾದ ದ್ಯಾಮಣ್ಣ, ಸೋಮಣ್ಣ,ರಾಘವೇಂದ್ರ, ಕೇಶವಮೂರ್ತಿ, ಜೆ.ಬಿ.ರಾಜು, ಬಸವರಾಜನಾಯಕ, ವೆಂಕಟೇಶ್, ಮಂಜುಳಾ, ಸಿದ್ಧಮ್ಮ, ನಿತಿನ್ ಗೌಡ, ಯೋಗೇಶ್, ಮಂಜುನಾಥ್, ಹನುಮಂತ್, ಪ್ರಜ್ವಲ್ , ರಂಗಸ್ವಾಮಿ, ವೇದಮೂರ್ತಿ, ಯಶೋಧರ, ವಾಸುದೇವ, ಪಾರ್ಥ ಸೇರಿದ್ದರು.
