
ಹಿರಿಯೂರು:
ಪರಿಶಿಷ್ಟ ಜಾತಿ ಪ್ರವರ್ಗ-ಸಿ ನಲ್ಲಿ ಪ್ರತಿ ಐದು ಹುದ್ದೆಗಳಿಗೆ ಒಂದನ್ನು ಅಲೆಮಾರಿ ಜಾತಿಗಳಿಗೆ ಮೀಸಲು ನೀಡಿ ವಿಧೇಯಕವನ್ನು ಮಂಡಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಎಂಬುದಾಗಿ ಕರ್ನಾಟಕ ರಾಜ್ಯ ದೊಂಬರ ಸಂಘದ ಉಪಾಧ್ಯಕ್ಷರಾದ ಡಿ.ಸಿ.ಪಾಣಿ ಅವರು ಹೇಳಿದರು.

ಸಂಖ್ಯಾ ದೃಷ್ಠಿಯಿಂದ ಅತಿ ದುರ್ಬಲರಾದ ಅಲೆಮಾರಿ ಜನಾಂಗಗಳ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಇದು.ಈ ವಿಧೇಯಕವು ಅಲೆಮಾರಿ ಜನಾಂಗಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಮುನ್ನುಡಿ.ಆದ್ದರಿಂದ ಈ ಜನಾಂಗಗಳು ಮತ್ತಷ್ಟು ಒಗ್ಗಟ್ಟಿನಿಂದ ಇರಬೇಕಾದ ಸನ್ನಿವೇಶ ಎಂಬುದಾಗಿ ಅವರು ಅಲೆಮಾರಿ ಜನಾಂಗಗಳಿಗೆ ಸಲಹೆ ನೀಡಿದ್ದಾರೆ.
