June 13, 2026
00004

ಹಿರಿಯೂರು:

ತಾಲ್ಲೂಕಿನ ಹುಲಗಲಕುಂಟೆ ಗ್ರಾಮದ  ಸಮೀಪ 40 ಕೋಟಿ ರೂಗಳ ವೆಚ್ಚದಲ್ಲಿ  ಕಾರ್ಮಿಕ ಶಾಲೆ   ಆರಂಭಿಸಲು ಮಂಜೂರಾತಿ  ದೊರೆತಿದೆ  ಎಂಬುದಾಗಿ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.

ನಗರದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ  ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಮತ್ತು ಹಿರಿಯೂರು ತಾಳ್ಲೂಕಿನ ಸ್ಮಾರಕಗಳ ಕುರಿತ “ಪ್ರಾಚೀನಸ್ಮಾರಕಗಳು” ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕ ವಸತಿ ಶಾಲೆ ಆರಂಭಗೊಂಡರೆ ದುಡಿಯುವ ವರ್ಗದವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿದ್ದು, ಭವಿಷ್ಯದಲ್ಲಿ ಅವರೆಲ್ಲಾ ಸಮಾಜದ ಮುಖ್ಯವಾಹಿನಿಗೆ  ಬರಲು ನೆರವಾಗಲಿದೆ ಬಡ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಗುವುದು ಕಷ್ಟ. ಈ ಕಾರಣಕ್ಕೆ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆರಂಭಿಸಿದೆ.  ಎಂದರಲ್ಲದೆ,

ಮಕ್ಕಳು ಓದಿನ ಕಡೆಗೆ  ಹೆಚ್ಚು ಗಮನ ಕೊಡಬೇಕು.  ಬಿಡುವಿದ್ದಾಗ ಸಂಗೀತ, ನೃತ್ಯ, ಜಾನಪದ ಕಲೆ, ನಾಟಕದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಅವರು ಮಾತನಾಡಿ ತಾಲ್ಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ “ಪ್ರಾಚೀನಸ್ಮಾರಕಗಳು” ಪುಸ್ತಕವನ್ನು 35 ಶಿಕ್ಷಕರ ಸಹಕಾರದೊಂದಿಗೆ  ಹೊರತರಲಾಗಿದೆ. 91 ಗ್ರಾಮ, 309ಛಾಯಾಚಿತ್ರ ಒಳಗೊಂಡ 228ಪುಟಗಳ ಪುಸ್ತಕವನ್ನು ಅಚ್ಚುಹಾಕಿಸುವುದು ಸವಾಲಿನ ಕೆಲಸವಾಗಿತ್ತು,  ಸಚಿವರಾದ ಡಿ.ಸುಧಾಕರ್ ಅವರು ಇದರ ಜವಬ್ದಾರಿ ಹೊತ್ತರು ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮಕ್ಕೆ  ಸಿ.ಶಿವಾನಂದ್ ಅವರು  ಎಲ್ಲರನ್ನೂ ಸ್ವಾಗತಿಸಿದರು.ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಎಂ.ನಾಸಿರುದ್ಧೀನ್, ಆರ್.ರಮೇಶ್, ವಿ.ಭಾಗ್ಯ, ಕೆ.ಆರ್.ತಿಪ್ಪೇಸ್ವಾಮಿ, ಎಂ.ಲೋಹಿತ್, ಹೆಚ್.ಅಶೋಕ್, ಲೋಕಮ್ಮ, ಶಿವಲಿಂಗಪ್ಪ, ಆರ್.ಟಿ.ಎಸ್.ಶ್ರೀನಿವಾಸ್, ಮಹೇಶ್ವರರೆಡ್ಡಿ, ಆರ್.ಟಿ. ರವೀಂದ್ರನಾಯ್ಕ, ಮುಖಂಡರುಗಳಾದ ಖಾದಿರಮೇಶ್, ಈರಲಿಂಗೇಗೌಡ, ಕಂದಿಕೆಎಸುರೇಶ್ ಬಾಬು, ಈ.ಮಂಜುನಾಥ್, ಜಿ.ಎಲ್.ಮೂರ್ತಿ,  ಕಲ್ಲಹಟ್ಟಿಹರೀಶ್, ದಿಂಡಾವರಮಹೇಶ್, ಜ್ಞಾನೇಶ್,  ವಿ. ಶಿವಕುಮಾರ್, ಸಾದತ್ ಉಲ್ಲಾ, ಜಿ.ದಾದಾಪೀರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *