
ಹಿರಿಯೂರು:
ಆರ್. ಎಸ್. ಎಸ್. ಮತ್ತು ಸಂಘ ಪರಿವಾರದವರು ಸನಾತನ ಧರ್ಮದವರು ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮತ್ತು ಪ್ರಗತಿ ವಿವರಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ದಲಿತ ದೌರ್ಜನ್ಯ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷ ಎಚ್.ಎನ್. ಕೇಶವಮೂರ್ತಿ ಹೇಳಿದ್ದಾರೆ.
ಈ ಸನಾತನ ಧರ್ಮೀಯರಾದ ಆರ್ಯರು ಬ್ರಿಟಿಷರ ಮೇಲೆ ಪ್ರಭಾವ ಬೀರಿ ಶಿಕ್ಷಣವನ್ನು ಮೇಲ್ಜಾತಿ ವರ್ಗದವರಿಗೆ ನೀಡಲು ಒತ್ತಾಯಿಸಿ ಯಶಸ್ವಿಯನ್ನು ಕಂಡರು. ನಂತರ ಕೊಲ್ಲಾಪುರದ ಶಾಹೂ ಮಹಾರಾಜರು, ಮೈಸೂರಿನ ರಾಜ ಒಡೆಯರು ಇತರ ರಾಜರುಗಳ ಪರಿಶ್ರಮದಿಂದ ಬ್ರಿಟಿಷರ ಕಾಲದಿಂದ ಶಿಕ್ಷಣವನ್ನು ಮೇಲ್ಜಾತಿಯನ್ನು ಒಳಗೊಂಡಂತೆ ಹಿಂದುಳಿದ ದಲಿತ ಎಲ್ಲಾ ಜಾತಿ ವರ್ಗದವರು ಶಿಕ್ಷಣ ನೀಡಲು ಪ್ರಾರಂಭಿಸಲಾಯಿತು.
ಅವರ ಶಿಕ್ಷಣವು ಕೇವಲ ವೇದಾಪುರಾಣಗಳು ಉಪನಿಷತ್ತುಗಳ ಮನುಸ್ಪೃತಿ ಸನಾತನಧರ್ಮದವರಿಗೆ ಮಾತ್ರ ಸೀಮಿತವಾಗಿದ್ದು, ಹಿಂದೂ ಧರ್ಮದವರಿಗೆಲ್ಲ ದೇಶದ ಜನರಿಗೆ ನಾಗರಿಕರಿಗೆ ಶಿಕ್ಷಣವು ಬಹಳ ಮುಖ್ಯವಾಗಿದ್ದು ಜನರ ವಿಕಾಸನ ಜೀವನ ಕ್ರಮಕ್ಕೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವು ಬಹಳ ಮುಖ್ಯವಾಗಿರುತ್ತದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಿಳಿಸಿರುತ್ತಾರೆ.
ಆದರೆ ಆರ್. ಎಸ್. ಎಸ್ ಮತ್ತು ಸಂಘ ಪರಿವಾರದವರು ಮತ್ತು ಸನಾತನ ಧರ್ಮದವರು ಯಾರೂ ಸಹ ಶಿಕ್ಷಣಕ್ಕೆ ಮತ್ತು ವೈಜ್ಞಾನಿಕವಾದಂತ ಶಿಕ್ಷಣಕ್ಕೆ ಒತ್ತು ನೀಡಿರುವುದಿಲ್ಲ. ಕೇವಲ ಅವೈಜ್ಞಾನಿಕ ವೇದ-ಉಪನಿಷತ್ತುಗಳಿಗೆ, ಪುರಾಣಗಳಿಗೆ, ಮನಸ್ಥಿತಿಗೆ, ಮೌಡ್ಯತೆಗೆ ಒತ್ತು ನೀಡಿರುತ್ತಾರೆ. ಇವುಗಳಿಂದ ಭಾರತಕ್ಕೆ ಮತ್ತು ನಾಗರಿಕರಿಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಸನಾತನ ಧರ್ಮದವರಿಂದ ರಚಿತವಾಗಿರುವ ಈ ಆರ್.ಎಸ್.ಎಸ್. ಮತ್ತು ಸಂಘ ಪರಿಹಾರವನ್ನು ತಾವುಗಳು ಸೇರದೆ ಮಕ್ಕಳನ್ನು ಈ ಸಂಘಗಳಿಗೆ ಸೇರದಂತೆ ಮುಂಜಾಗ್ರತೆ ವಹಿಸಿ ದೇಶವನ್ನು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ನೆರವೇರಿಸುವಂತಹ ಭಾರತ ಮಾತೆಗೆ ಜೈಕಾರ ಹಾಕುವ ಸಂಘ ಸಂಸ್ಥೆಗಳೊಂದಿಗೆ ಮತ್ತು ಪಕ್ಷಗಳೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.
ತಾವು ಮತ್ತು ತಮ್ಮ ಮಕ್ಕಳು ಶಿಕ್ಷಣ ಪಡೆದು ವಿದ್ಯಾಭಾಸವನ್ನು ಪಡೆದು ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಿ ದೇಶ ಪ್ರೇಮಿಯಾಗಿ ಹಾಗೂ ಉತ್ತಮ ದೇಶದ ಪ್ರಜೆಯಾಗಿ ಎಲ್ಲಾ ನಾಗರಿಕರು ಬಾಳ ಬೇಕೆಂಬುದೇ ನನ್ನ ಆಶಯವಾಗಿದ್ದು, ಸನಾತನ ಧರ್ಮದವರು ಆರ್.ಎಸ್.ಎಸ್. ಮತ್ತು ಸಂಘ ಪರಿವಾರದವರು ಪ್ರಜಾಪ್ರಭುತ್ವದ ಸಂವಿಧಾನದ ವಿರೋಧಿಯಾಗಿರುತ್ತಾರೆ ಹಾಗೂ ಭಾರತ ದೇಶದ ನ್ಯಾಯಾಂಗದೇವತೆಗೆ ಅವಮಾನ ಮಾಡಿ ದೇಶದ್ರೋಹಿ ಮತ್ತು ರಾಷ್ಟ್ರದ್ರೋಹಿಯಾಗಿರುತ್ತಾರೆ ಇವರನ್ನು ನಿಮ್ಮ ಕುಟುಂಬದಿಂದ ಮತ್ತು ಮನಸ್ಸಿನಿಂದ ದೂರಇಡಿ ಎಂಬುದಾಗಿ ತಮ್ಮ ಸಮುದಾಯದವರಿಗೆ ಕರೆ ನೀಡಿದ್ದಾರೆ.
