
ಹಿರಿಯೂರು :
ತಾಲ್ಲೂಕಿನ ಮುಂಗಸವಳ್ಳಿ ಹಾಗೂ ಚಂದ್ರಗಿರಿ ಗ್ರಾಮಗಳಿಗೆ ಪೌರಾಡಳಿತ ಸಚಿವರಾದ ಸನ್ಮಾನ್ಯ ಹೆಚ್.ಸಿ. ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕರಾದ ಶ್ರೀ ಹೆಚ್.ಡಿ. ರಂಗನಾಥ್ ಅವರೊಂದಿಗೆ ಭೇಟಿ ನೀಡಿದ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸುಹಾಸ್ ಸುಧಾಕರ್ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಗ್ರಾಮಗಳ ಅಭಿವೃದ್ಧಿ, ಮೂಲಭೂತ ಸೌಕರ್ಯಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದು, ಅವರ ಅಹವಾಲುಗಳು ಮತ್ತು ಮನವಿಗಳನ್ನು ಆಲಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
