
ಹಿರಿಯೂರು :
ಹಿರಿಯೂರಿಗೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಮೇಟಿಕುರ್ಕೆ ಗ್ರಾಮಕ್ಕೆ ಭದ್ರ ಮೇಲ್ದಂಡೆ ಯೋಜನೆಯಲ್ಲಿ ನೀರು ಹಂಚಿಕೆ ಮಾಡಿಲ್ಲದಿರುವುದು ಪ್ರಜಾಪ್ರಭುತ್ವದ ಅಣಕ ಎಂಬುದಾಗಿ ವಿ ವಿ ಸಾಗರ ನೀರಾವರಿ ಕಸವನಹಳ್ಳಿ ರಮೇಶ್ ಹೋರಾಟಸಮಿತಿಯ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಹೇಳಿದರು.
ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಮೇಟಿಕುರ್ಕೆ ಗ್ರಾಮವನ್ನು ಕೈಬಿಟ್ಟಿರುವ ಬಗ್ಗೆ ಹೋರಾಟದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಪಕ್ಕದ ಯರದಕಟ್ಟೆ ಗ್ರಾಮದ ಕೆರೆಗೆ ನೀರು ಕೊಟ್ಟು ಮೇಟಿಕುರ್ಕೆಗೆ ಕೊಡದಿರುವುದು ಅಲ್ಲದೇ ಮೇಟಿಕುರ್ಕೆ ಗ್ರಾಮದ ಜಮೀನುಗಳನ್ನು ಬಳಸಿಕೊಂಡು ಕೈಗಾರಿಕೆ ವಲಯ, ರಾಷ್ಟ್ರೀಯ ಹೆದ್ದಾರಿ ರೈಲ್ವೆ ಇತ್ಯಾದಿ ಯೋಜನೆಗಳಿಗೆ ಕೃಷಿ ಜಮೀನುಗಳನ್ನು ಬಿಟ್ಟುಕೊಟ್ಟಿದ್ದು ಸುಮಾರು 350 ಎಕರೆ ವಿಸ್ತೀರ್ಣದ ಮೇಟಿಕುರ್ಕೆಗೆ ನೀರನ್ನೆ ಕೊಟ್ಟಿಲ್ಲ ಇದೆಂಥ ದುರಂತ,
ಇನ್ನು 20 ವರ್ಷಗಳಲ್ಲಿ ಈ ಗ್ರಾಮ ಇರುವುದಿಲ್ಲ ಇದಕ್ಕಾಗಿ ಗ್ರಾಮದವರು ಕೆರೆಗೆ ನೀರು ಹರಿಸಿ ,ನಮ್ಮ ಭೂಮಿ ಉಳಿಸಿ ಎನ್ನುವ ಘೋಷವಾಕ್ಯದೊಂದಿಗೆ ಮನೆಗೊಬ್ಬರು ಹೋರಾಟಕ್ಕಿಳಿಯಬೇಕು ಎಂಬುದಾಗಿ ಹೇಳಿದರು.
ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರರಪ್ಪ ಮಾತನಾಡಿ, ನೀರಿಗಾಗಿ ಪಕ್ಷಾತೀತ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದರು. ಸಭೆ ಅಧ್ಯಕ್ಷತೆಯನ್ನು ಮೇಟಿಕುರ್ಕೆ ಲೋಕೇಶ್ ವಹಿಸಿದ್ದರು. ಜಯಣ್ಣ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಗಡಾರಿ ಕೃಷ್ಣಪ್ಪ, ಬ್ಯಾಡರಹಳ್ಳಿ ಶಿವಕುಮಾರ್, ಮಂಜುನಾಥ್ ಕಾತ್ರಿಕೇನಳ್ಳಿ ,ಪಿಟ್ಲಲಿ ಶ್ರೀನಿವಾಸ್, ಗಿಡ್ಡೋಬನಹಳ್ಳಿ ಅಶೋಕ್, ಹುಲುಗಲ್ಲ ಕುಂಟೆ ಶಶಿಕಲಾ, ಪ್ರಸನ್ನ, ರಂಗಸ್ವಾಮಿ, ಇತರರು ಉಪಸ್ಥಿತರಿದ್ದರು.
