
ಹಿರಿಯೂರು :
ನಮ್ಮ ತಂದೆಯಾದ ಸಚಿವ ಡಿ.ಸುಧಾಕರ್ ರವರ ಸೇವಾ ಮನೋಭಾವ, ಜನಪರ ಕಾಳಜಿಯಿಂದ ಇಂದಿಗೂ ಸಾರ್ವಜನಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ, ಆ ಭಗವಂತನು ನಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ದೊರಕಲಿ ಎಂಬುದಾಗಿ ಸಚಿವ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ಭಕ್ತಿಭಾವದಿಂದ ದೇವಿಯನ್ನು ಪ್ರಾರ್ಥಿಸಿದರು.
ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ “ಆಲೂರಕ್ಕ”ನ ಅರಸೇವೆಯಲ್ಲಿ ಭಾಗವಹಿಸಿ, ದೇವಿಯ ಆಶೀರ್ವಾದ ಪಡೆದು, ನಂತರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅರಸೇವೆಗೆ ಆಗಮಿಸಿದ್ದ ಭಕ್ತರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಭಕ್ತಿಭಾವ ಮತ್ತು ಆಶಯಗಳನ್ನು ಆಲಿಸಿದರು.
