May 31, 2026
002

ಹಿರಿಯೂರು :

ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್ ಅವರು ಶ್ವಾಸಕೋಶದ ಸೋಂಕಿನಿಂದ ಬೆಂಗಳೂರಿನಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ಬೆಳಗಿನಜಾವ 3-15ಕ್ಕೆ ನಿಧನರಾದರು, ಸಚಿವ ಡಿ.ಸುಧಾಕರ್ ರವರ ನಿಧನಕ್ಕೆ “ಹಿರಿಯೂರುನ್ಯೂಸ್” ತಂಡದ ವತಿಯಿಂದ ಭಾವಪೂರ್ಣಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಅವರ ನಿಧನದ ನಂತರ ನಗರದ ನೆಹರು ಕ್ರೀಡಾಂಗಣದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಟ್ಟು, ಸೋಮವಾರ ಸಂಜೆ ಇವರ ಅಂತ್ಯಕ್ರಿಯೆಯನ್ನು ಚಳ್ಳಕೆರೆಯ ಜೈನಧಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಸಚಿವ ಡಿ.ಸುಧಾಕರ್ ರವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ಆ ಭಗವಂತನು ದಯಪಾಲಿಸಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದ ಮುಖ್ಯಸ್ಥರು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆ ರಂಗನಾಥ್ ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್, ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ಸಂತಾಪ ಸೂಚಿಸಿದ್ದಾರೆ.

About The Author

Leave a Reply

Your email address will not be published. Required fields are marked *