April 14, 2026
003

ಹಿರಿಯೂರು :

ನಗರವಾಸಿಯಾದ ಶ್ರೀಮತಿ ಭಾರತಮ್ಮನವರ ಪುತ್ರಿಯಾದ ಕುಮಾರಿ ಸಿ.ಜಿ.ಚಂದನ ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ, ಇದೀಗ 2025-26ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು, ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡ ಇವರ ತಾಯಿ ಮೊರಾರ್ಜಿ ವಸತಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುತ್ತಾರೆ, ಇದರಲ್ಲಿ ಬಂದ ಹಣದಿಂದ ತಮ್ಮ ಬಾಡಿಗೆ ಮನೆಯಲ್ಲಿ ಸಂಸಾರ ನೀಗಿಸುತ್ತಾ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಈ ಎಲ್ಲಾ ಕಷ್ಟಗಳ ನಡುವೆಯೂ ಕುಮಾರಿ ಸಿ.ಜಿ.ಚಂದನ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಚಂದನರವರು ಕನ್ನಡ ಭಾಷೆಯಲ್ಲಿ 99, ಆಂಗ್ಲ ಭಾಷೆಯಲ್ಲಿ 96, ಭೌತಶಾಸ್ತ್ರ ವಿಷಯದಲ್ಲಿ 97, ರಸಾಯನಶಾಸ್ತ್ರದಲ್ಲಿ 96, ಗಣಿತ 100 ಮತ್ತು ಜೀವಶಾಸ್ತ್ರದಲ್ಲಿ 98 ಒಟ್ಟು 586 ಅಂಕಗಳೊಂದಿಗೆ ಶೇಕಡ 97.6% ಪಡೆದು ತಾಲೂಕಿಗೆ 2ನೇ ಸ್ಥಾನ ಹಾಗೂ ಜಿಲ್ಲೆಗೆ 5ನೇ ಸ್ಥಾನ ಪಡೆದು ತಮ್ಮ ಹೆತ್ತವರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕುಮಾರಿ ಸಿ.ಜಿ.ಚಂದನರವರು ಭವಿಷ್ಯದಲ್ಲಿ  ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿರುವ ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂಬುದಾಗಿ ಯಾಜ್ಞವಲ್ಕ್ಯ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *