April 14, 2026
000011

ಹಿರಿಯೂರು :

ದುಡಿಮೆಯ ಸ್ವಲ್ಪ ಭಾಗವನ್ನು ಜನಪರ ಸೇವಾಕಾರ್ಯಗಳಿಗೆ ಉಪಯೋಗಿಸಬೇಕೆಂಬ ಉದ್ದೇಶದಿಂದ ನಮ್ಮ ಜೀವದಾತೆ ಫೌಂಡೇಶನ್ ನಿಂದ ಯುಗಾದಿ ಹಬ್ಬದ ಪ್ರಯುಕ್ತ ಬಡಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ಎಲ್ಲರೂ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸುವಂತೆ ಮಾಡಲಾಗುತ್ತಿದೆ ಎಂಬುದಾಗಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರು ಹಾಗೂ ಜೀವದಾತೇ ಫೌಂಡೇಶನ್ ಸಂಸ್ಥಾಪಕರಾದ ಕೆ.ಅಭಿನಂದನ್ ಹೇಳಿದರು.

ತಾಲೂಕಿನ ಧರ್ಮಪುರ ಹೋಬಳಿಯ ಕೃಷ್ಣಾಪುರ ಗ್ರಾಮದ ಎಸ್‌.ಸಿ.ಕಾಲೋನಿಯ ಬಡಕುಟುಂಬಗಳಿಗೆ ಯುಗಾದಿ ಹಬ್ಬದ ಅಂಗವಾಗಿ ಆಹಾರದ ಕಿಟ್ ವಿತರಿಸಿ, ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಯಲ್ಲಪ್ಪ, ನಾಗರಾಜರಾವ್, ದ್ಯಾಮಣ್ಣ, ಮೋಹನ್, ರವಿ, ರಾಕೇಶ್, ಗುರುಲಿಂಗಪ್ಪ, ದೇವರಾಜ್, ದಿಲೀಪ್, ಶಿವಣ್ಣ, ಗುರುಮೂರ್ತಿ, ನಾಗರಾಜ್, ಭಾರತ್, ದೇವೇಂದ್ರ, ದೇವೇಂದ್ರಪ್ಪ, ಹೋಬಳೇಶ್, ಲಕ್ಷ್ಮಣ್, ಅಶ್ವತ್, ಪ್ರದೀಪ್, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಊರಿನ ಮುಖಂಡರುಗಳು ಹಾಗೂ ಗ್ರಾಮಸ್ಥರು ಆಹಾರದ ಕಿಟ್ ವಿತರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

About The Author

Leave a Reply

Your email address will not be published. Required fields are marked *