
ಹಿರಿಯೂರು:
ನಗರದಲ್ಲಿ ಸಮಸ್ತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು. ನಗರದ ಜಾಮಿಯಾ ಮಸೀದಿ ಬಳಿ ಸಮಸ್ತ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ, ಅಲ್ಲಿಂದ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಭವ್ಯ ಮೆರವಣಿಗೆ ನಡೆಸಿದರು.
ಈ ಮೆರವಣಿಗೆಯು ತೇರುಮಲ್ಲೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಟು, ನಗರದ ನೆಹರು ವೃತ್ತ ಹಾಗೂ ಗಾಂಧಿ ವೃತ್ತದ ಮೂಲಕ ಸಾಗಿ ಮೈಸೂರು ಬ್ಯಾಂಕ್ ಬಳಿಯ ಈದ್ಗಾ ಮೈದಾನವನ್ನು ತಲುಪಿತು.

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮುನೀರ್ ಮುಲ್ಲಾ, ಧರ್ಮಗುರು ಸಿಬ್ಗತ್ ಉಲ್ಲಾ ಸೇರಿದಂತೆ ನೂರಾರು ಮುಸ್ಲಿಂ ಮುಖಂಡರುಗಳು ಹಾಗೂ ಸಮಸ್ತ ಮುಸ್ಲಿಂ ಬಾಂಧವರು ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
