April 14, 2026
08

ಹಿರಿಯೂರು :

ತಾಲ್ಲೂಕಿನಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ವಾಸಿಸುತ್ತಿರುವ ನಿರಾಶ್ರಿತರಿಗೆ ಹಾಗೂ ಮಕ್ಕಳಿಗೆ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ರೇಷನ್ ಕಿಟ್ ಹಾಗೂ ಹೊಸ ಬಟ್ಟೆಗಳನ್ನು ಮನವಿ ಟ್ರಸ್ಟ್  ವತಿಯಿಂದ ವಿತರಿಸಲಾಗುತ್ತಿದ್ದು, ಹಬ್ಬದ ಸಡಗರ-ಸಂಭ್ರಮ ಇವರಿಗೂ ಸಿಗುವಂತಾಗಲಿ ಎಂಬುದು ನಮ್ಮ ಉದ್ದೇಶವಾಗಿದೆ ಎಂಬುದಾಗಿ ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್ ಹೇಳಿದರು.

ನಗರದ ನಿರಾಶ್ರಿತಕುಟುಂಬಗಳಿಗೆ ಹಾಗೂ ಮಕ್ಕಳಿಗೆ ಮನವಿ ಟ್ರಸ್ಟ್  ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ರೇಷನ್ ಕಿಟ್ ಹಾಗೂ ಹೊಸ ಬಟ್ಟೆಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್, ಮನವಿ ಟ್ರಸ್ಟ್ ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *