April 17, 2026
2

ಹಿರಿಯೂರು:

ನಗರದ ಶ್ರೀ ಶಕ್ತಿಕ್ಷೇತ್ರ ನಗರ ದೇವತೆ  ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ  ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಂಗಳವಾರ ಸುಮಂಗಲೆಯರಿಂದ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ  ಹಾಗೂ ಆರತಿಸೇವೆ   ಹಲವಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಭಾವದಿಂದ ನೆರವೇರಿಸಲಾಯಿತು.

ಇದರ ಅಂಗವಾಗಿ  ನಗರದ ಸುಮಂಗಲೆಯರು ದುರ್ಗಾಪರಮೇಶ್ವರಿ  ದೇವರಿಗೆ ಮಡ್ಲಕ್ಕಿ ನೀಡಿ ಆರತಿ ಬೆಳಗಿದರು. ದುರ್ಗಾಪರಮೇಶ್ವರಿ ದೇವತೆಗೆ ವಿಶೇಷ  ಅಲಂಕಾರ ಮಾಡಲಾಗಿತ್ತು.

ದುರ್ಗಾಪರಮೇಶ್ವರಿ ದೇವತೆಗೆ  ವಿಶೇಷ ಅಲಂಕಾರ ಮಾಡಲಾಗಿತ್ತು ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ  ನಡೆಯಿತು. ಸಹಸ್ರಾರು ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *