March 6, 2026
00002

ಹಿರಿಯೂರು:

ತಾಲ್ಲೂಕು ಮಟ್ಟದ  ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಅಗತ್ಯ ಸಹಕಾರ ನೀಡಲಾಗುವುದು  ಎಂಬುದಾಗಿ  ಜಿಲ್ಲಾ  ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಮಂಗಳವರ ಹಮ್ಮಿಕೊಳ್ಳಲಾಗಿದ್ದ  ಕ.ಸಾ.ಪ. ತಾಲ್ಲೂಕು ಘಟಕದ  ಪದಾಧಿಕಾರಿಗಳ  ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡು-ನುಡಿಯ ಬೆಳವಣಿಗೆ, ಕನ್ನಡ ಸಾಹಿತ್ಯಕ್ಕೆ ಹಿರಿಯೂರು ತಾಲ್ಲೂಕಿನ ಸಾಹಿತಿಗಳು, ಬರಹಗಾರರು, ಪತ್ರಕರ್ತರು, ಕಲಾವಿದರು, ಕನ್ನಡಪರ ಹೋರಾಟಗಾರರು ನೀಡಿರುವ ಕೊಡುಗೆ ಸ್ಮರಣೀಯ. ಫೆಬ್ರವರಿ 7ರಂದು  ತಾಲ್ಲೂಕು ಮಟ್ಟದ  ಕನ್ನಡ  ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ  ಆಚರಿಸಬೇಕು.ತಾಲ್ಲೂಕು ಆಡಲಿತ, ಸಂಘ-ಸಂಸ್ಥೆಗಳು ಅಗತ್ಯ ಸಹಕಾರ ನೀಡಬೇಕು ಎಂಬುದಾಗಿ ಅವರು ಹೇಳಿದರು.

ಪರಿಷತ್ತಿನ ಕೋಶಾಧ್ಯಕ್ಷರಾದ  ಜಿ.ಪ್ರೇಮ್ ಕುಮಾರ್ ಅವರು ಮಾತನಾಡಿ  ಕನ್ನಡಭಾಷೆ, ನಾಡು, ಪರಂಪರೆ, ಶ್ರೀಮಂತ ಸಾಹಿತ್ಯ, ಸಂಸ್ಕೃತಿಯನ್ನು  ಇಂದಿನ ಯುವಜನತೆಗೆ ಪರಿಚಯಿಸುವ ದೃಷ್ಠಿಯಿಂದ  ವಿದ್ಯಾರ್ಥಿಗಳು-ಯುವಜನರು, ಕನ್ನಡಪರ ಸಂಘಟನೆಗಳ ಸಹಭಾಗಿತ್ವದಲ್ಲಿ  ಸಾಹಿತ್ಯ ಸಮ್ಮೆಳನ ನಡೆಯಲಿ. ಸಾಹಿತಿಗಳ, ಬರಹಗಾರರು ಸೇರಿ ಎಲ್ಲರನ್ನೂ ಒಳಗೊಂಡ ಕನ್ನಡದ ಹಬ್ಬವಾಗಿ ಆಚರಿಸಬೇಕು ಎಂಬುದಾಗಿ ಅವರು ಹೇಳಿದರು.

ದಕ್ಷಿಣ ಕಾಶಿ ಖ್ಯಾತಿಯ ತೇರುಮಲ್ಲೆಶನ ಸನ್ನಿಧಿಯಲ್ಲಿ ಫೆಬ್ರವರಿ7ರಂದು ಮತತು 7ನೇ ತಾಲ್ಲೂಕು ಮಟ್ಟದ  ಕನ್ನಡಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತಿ, ಬರಹಗಾರ, ಹಿರಿಯ ಪತ್ರಕರ್ತರೂ ಆಗಿರುವ ಎಂ.ಜಿ.ರಂಗಸ್ವಾಮಿ  ಅವರು ಸಮ್ಮೇಳನದಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ವಾಗಿದೆ.

ಈ ಸಭೆಯಲ್ಲಿ  ತಹಶೀಲ್ದಾರ್ ಎಂ.ಸಿದ್ದೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿ.ರಾಮಚಂದ್ರಪ್ಪ, ಪದಾಧಿಕಾರಿಗಳಾದ ಅಸ್ಗರ್ ಅಹಮ್ಮದ್, ಹರ್ತಿಕೋಟೆ ಮಹಾಸ್ವಾಮಿ, ಹೆಚ್.ಟಿ.ಪ್ರಸನ್ನ,  ಜಿ.ಎಲ್.ಮೂರ್ತಿ,  ಮಹಮ್ಮದ್ ಫಕೃದ್ಧೀನ್, ಪುಷ್ಪಾ ಶಿಲ್ಪಾ, ವೇದಾ, ಜಗದೀಶ್, ಶಫೀವುಲ್ಲಾ, ಹೆಚ್.ಆರ್.ಶಂಕರ್, ರಮೇಶ್, ನಾಗರಾಜ್, ರೈತ ಮುಖಂಡರಾದ ಕೆ.ಸಿ.ಹೊರಕೇರಪ್ಪ, ಖಾದಿಜೆ.ರಮೇಶ್, ಈರಲಿಂಗೇಗೌಡ, ಮುದ್ದುರಾಜ್, ಅಶೋಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *