
ಹಿರಿಯೂರು:
ಸಂಗೀತವು ಮನಸ್ಸಿಗೆ ಸಂತೋಷ ನೀಡಿ ದುಃಖ, ದುಮ್ಮಾನ , ಸಂಕಟ, ವೇದನೆ ದೂರ ಮಾಡಿ ಮನಸ್ಸನ್ನು ಹಗುರಗೊಳಿಸಿ ಹೊಸ ಬದುಕು ರೂಪಿಸಲು ಪ್ರೇರಣೆ ನೀಡುತ್ತದೆ ಎಂಬುದಾಗಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜೆ.ದಿನೇಶ್ ಅವರು ಹೇಳಿದರು.
ನಗರದ ವೇದಾವತಿ ಬಡಾವಣೆಯ ಪಿ.ಎಂ.ಶ್ರೀ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಕ್ಕರೆ ಕಾರ್ಖಾನೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ , ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಕಲಾ ಸಂಘ(ರಿ) ಸಕ್ಕರ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕರ ಸಂಕ್ರಾತಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಂಕ್ರಾತಿ ಸಂಭ್ರಮ ಸಂಗೀತಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯ, ಸಂಗೀತ, ರಂಗಕಲೆ, ಮಾನವನ ಬದುಕಿನ ಸಾಂಸ್ಕೃತಿಕ ನೆಲೆಗಳಾಗಿವೆ. ದೇಶದ ಸಾಂಸ್ಕೃತಿಕ ಪರಂಪರೆಯ ಬದುಕಿನಲ್ಲಿ ಅನಾವರಣಕ್ಕೆ ಕಾರಣವಾಗಿದೆ. ಇವು ಮನುಷ್ಯನಿಗೆ ಬೇಕಾದ ಸೌಹಾರ್ದತೆ, ಸಹಬಾಳ್ವೆ, ಪ್ರೀತಿ, ಮಮತೆ, ಗೌರವ ಹಾಗೂ ಮುಷ್ಯತ್ವವನ್ನು ತಂದುಕೊಡುತ್ತದೆ ಎಂಬುದಾಗಿ ಅವರು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿಸಕ್ಕರ ಅವರು ಮಾತನಾಡಿ ಸಂಗೀತ ಒಂದು ತಪಸ್ಸು,ಸಂಗೀತವನ್ನು ಹೇಳುವುದರಿಂದ ಕೇಳುವುದರಿಂದ ಮಾನಸಿಕ ನೆಮ್ಮದಿ ಏಕಾಗ್ರತೆ ದೊರೆಯುತ್ತದೆ. ಆದ್ದರಿಂದ ಸಂಗೀತವನ್ನು ಮಾನವನ ಬದುಕಿನ ದಿವ್ಯ ಔಷಧಿ ಎಂದು ಕರೆಯಲಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಕ್ಕರೆ ಕಾರ್ಖನೆಯ ಬಡ್ತಿ ಮುಖ್ಯ ಶಿಕ್ಷಕರಾದ ಎಂ.ರಮೇಶ ನಾಯ್ಕ ಅವರು ಮಾತನಾಡಿ ಸಂಗೀತ ಒಂದು ಸಮಾಜ, ಸಮುದಾಯ, ವರ್ಗಕ್ಕೆ ಸೀಮಿತವಾಗಿಲ್ಲ.ಇದು ಎಲ್ಲಾ ಸಮುದಾಯಗಳ ಸ್ವತ್ತು ಸಂಗೀತವನ್ನು ಎಲ್ಲರೂ ಕಲಿಯಬಹುದಾಗಿದೆ.
ಆದ್ದರಿಂದ, ಕಲೆ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಪಠ್ಯಚಟುವಟಿಕೆಗಳಷ್ಟೇ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಅಗತ್ಯವಾಗಿದ್ದು, ಇದರಿಂದ ಏಕಾಗ್ರತೆ, ಕ್ರೀಯಾಶೀಲತೆ, ಸೃಜನಶೀಲತೆ ಬೆಳೆಯುತ್ತದೆ. ಕಾರ್ಯಕ್ರಮಗಳನ್ನು ರೂಪಿಸುವ ಇಂತಹ ಸಂಘ-ಸಂಸ್ಥೆಗಳನ್ನು, ಪ್ರೋತ್ಸಾಹಿಸುವುದು ಎಲ್ಲರ ಜವಬ್ದಾರಿಯಾಗಿದೆ ಎಂಬುದಾಗಿ ಅವರು ಹೇಳಿದರು.
ಸಂಕ್ರಾತಿ ಸಂಭ್ರಮ ಸಂಗೀತ, ಗಾನ ಕಾರ್ಯಕ್ರಮದಲ್ಲಿ ಟಿ.ಸುಲೋಚನ ಮತ್ತು ತಂಡದಿಂದ ಕರ್ನಾಟಕ ಸಂಗೀತ, ಗೀತಾ, ರಾಧಕೃಷ್ಣ ತಂಡದಿಂದ ಭಜನಾ ಪದಗಳು. ಟಿ.ಯಮುನಾ ಮತ್ತು ತಂಡದಿಂದ ವಚನ ಗಾಯನ, ಎಂ.ಸಿದ್ಧಗಂಗಮ್ಮ ಮತ್ತು ತಂಡದಿಂದ ಸುಗಮ ಸಂಗೀತವನ್ನು ಕಲಾವಿದರು ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀಹರಿ ವಾಸವಿ ಭಜನಾ ಮಂಡಳಿ ಅಧ್ಯಕ್ಷರಾದ ಗೀತಾರಾಧಕೃಷ್ಣ, ಸಂಗೀತ ವಿದುಷಿ ಟಿ.ಸುಲೋಚನ, ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ ಉಪಾಧ್ಯಕ್ಷರಾದ ಶ್ರೀಮತಿ ಎಸ್. ನಾಗಸುಂದರಮ್ಮ, ಸುಬ್ಬಣ್ಣಶೆಟ್ಟಿ, ಚಂದ್ರವದನಸತ್ಯಮೂರ್ತಿ, ಶ್ರೀಮತಿ ಎಂ.ವಿ.ನಾಗರತ್ನಮ್ಮ, ಎನ್.ಆರ್. ಜಯಲಕ್ಷ್ಮಿ ಇವರುಗಳನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎನ್.ಚಿತ್ರಜಿತ್ ಯಾದವ್, ಯುವ ಮುಖಂಡರಾದ ಸಿ.ಆರ್.ಓಬಳೇಶ್, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜೆ.ನಿಜಲಿಂಗಪ್ಪ, ಹಾರ್ಮೋನಿಯಂ ವಾದಕರಾದ ಎನ್.ಶಿವಲಿಂಗಪ್ಪ, ಬಿ.ಎಸ್.ಅಭಿಷೇಕ್, ಯಶೋಧರ, ಶಿಕ್ಷಕರಾದ ಎನ್.ಪಿ.ಮಹೇಶಣ್ಣ, ಹೆಚ್.ಮಲ್ಲಿಕ್ ಸಾಬ್, ಎಸ್.ಮಂಜುಳಾ, ಹೆಚ್.ಜಿ.ವೀಣಾ, ಆರ್.ಮಂಜುಳಾ, ಪವಿತ್ರ, ಶಶಿಕಲಾ, ಯಶೋಧರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
