
ಹಿರಿಯೂರು :
ನಗರದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಸ್ವಾಭಿಮಾನಿ ದಲಿತ ಪರಸಂಘಟನೆಗಳ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕು ಸ್ವಾಭಿಮಾನಿ ದಲಿತ ಪರಸಂಘಟನೆಗಳ ಸಮಿತಿಗೆ ಅಧ್ಯಕ್ಷರಾಗಿ ಬೋರನಕುಂಟೆ ಜೀವೇಶ್, ಕಾರ್ಯಾಧ್ಯಕ್ಷರಾಗಿ ಹೆಗ್ಗೆರೆ ಮಂಜುನಾಥ್, ಉಪಾಧ್ಯಕ್ಷರಾಗಿ ರಾಯಣ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ವಿ.ಶಿವಕುಮಾರ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕು ಸ್ವಾಭಿಮಾನಿ ದಲಿತ ಪರಸಂಘಟನೆಗಳ ಸಮಿತಿ ಕಾರ್ಯದರ್ಶಿಯಾಗಿ ಕೆ.ಆರ್.ಹಳ್ಳಿ ರಘುನಾಥ್, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ರಾಜು, ಸಹಕಾರ್ಯದರ್ಶಿಯಾಗಿ ಎಸ್.ಎನ್.ಕದುರಪ್ಪ ಶಿಡ್ಲಯ್ಯನ ಕೋಟೆ, ಖಜಾಂಚಿಯಾಗಿ ಪಟ್ರೆಹಳ್ಳಿ ಮಹೇಶ್ ಮತ್ತು ಮಂಜು ಹಿಂಡಸಕಟ್ಟೆ,
ಹಾಗೂ ತಾಲ್ಲೂಕು ಸ್ವಾಭಿಮಾನಿ ದಲಿತ ಪರಸಂಘಟನೆಗಳ ಸಮಿತಿ ಸದಸ್ಯರುಗಳಾಗಿ ಪಿಟ್ಲಾಲಿ ರಂಗಸ್ವಾಮಿ. ಎನ್,ಮಂಜುನಾಥ್ ಪಿ,ಚನ್ನಕೇಶ್ವರ, ಡಿ.ಪುರುಷೋತ್ತಮ್, ಸತೀಶ್, ಈ.ಮಂಜುನಾಥ್, ಕೆಂಚಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು.

