June 1, 2026
000003

ಹಿರಿಯೂರು :

ನಗರದ ಬಲಿಜ ಸಮುದಾಯ ಭವನದಲ್ಲಿ ಡಿಸೆಂಬರ್ 30 ರ ಮಂಗಳವಾರದಂದು “ವೈಕುಂಠ ಏಕಾದಶಿ” ಪ್ರಯುಕ್ತ ಶ್ರೀಲಕ್ಷ್ಮೀವೆಂಕಟೇಶ್ವರಸ್ವಾಮಿಗೆ ವಿಶೇಷ ಪೂಜಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿಗೆ ಅಲಂಕಾರ ಸೇವೆ, ಅರ್ಚನೆ, ಅಭಿಷೇಕ, ಸ್ವಾಮಿಯ ದರ್ಶನ ಮಹಾಮಂಗಳಾರತಿ, ಮಹಾ ನೈವೇದ್ಯ, ಮಹಾಪೂಜೆ, ದೀಪಾರಾಧನೆ, ಸುಮಂಗಲರಿಂದ ತೊಟ್ಟಿಲು ಪೂಜೆ, ಪ್ರಸಾದ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿಯ ದರ್ಶನ ಪಡೆದು, ಶ್ರೀಲಕ್ಷ್ಮಿವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು, ಬಂದಿರುವ ಭಕ್ತಾದಿಗಳಿಗೆ ಪ್ರಸಾದ ವಿತರಣೆ ವ್ಯವಸ್ಥೆಯನ್ನು ಬಲಿಜ ಸಮುದಾಯದ ವತಿಯಿಂದ ಮಾಡಲಾಯಿತು.

About The Author

Leave a Reply

Your email address will not be published. Required fields are marked *