
ಹಿರಿಯೂರು:
ನೀರಿಗೆ ಭಕ್ತಿ ಬೆರೆಸಿದರೆ ತೀರ್ಥವಾಗುತ್ತದೆ, ಅನ್ನಕ್ಕೆ ಭಕ್ತಿ ಬೆರೆಸಿದರೆ ಪ್ರಸಾದವಾಗುತ್ತದೆ. ಮಾಡುವ ಕೆಲಸಕ್ಕೆ ಶ್ರದ್ಧೆ ಬೆರೆಸಿದರೆ ಯಶಸ್ಸು ನಮ್ಮದಾಗುತ್ತದೆ ಎಂಬುದಾಗಿ ಶ್ರೀಮಾತಾಚೈತನ್ಯಮಯಿ ಮಾತಾಜಿ ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಹಿರಿಯೂರು ಶ್ರೀ ಪರಮಪೂಜ್ಯ ಡಾ.”ಡಿ.ವೀರೇಂದ್ರಹೆಗ್ಗಡೆ ಮತ್ತು ಮಾತೃಶ್ರೀಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನಡೆಯುವ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಆದಿವಾಲವಲಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಯರಗುಂಟೇಶ್ವರಸ್ವಾಮಿ ಮತ್ತು ಶ್ರೀಕರಿಯಮ್ಮ ದೇವಿಯ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾದೇಶಿಕ ನಿರ್ದೇಶಕರಾದ ಗೀತಾ ಬಿ. ಅವರು ಮಾತನಾಡಿ ದೇವರು ನಮ್ಮಲ್ಲಿಯೇ ಇದ್ದಾರೆ.ಆದರೆನಾವು ಮರೆತಿದ್ದೇವೆ. ಪೂಜೆಗಳನ್ನು ಮಾಡುವುದರ ಮೂಲಕ ದೇವರು ನಮಗೆ ಹತ್ತಿರವಾಗುತ್ತಾರೆ. ಮಹಿಳೆಯರಿಗೆ ಸ್ವಾವಲಂಬನೆಯಿಂದ ಜೀವನ ನಡೆಸಿದರೆ ಬದುಕು ಸಾರ್ಥಕತೆಯನ್ನು ಮೆರೆಯುತ್ತದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿನೋದಮ್ಮ, ಸೈಯದ್ ಮುನೀರ್ ಭಾಷಾ, ಕಿರಣ್, ತ್ರಿಯಂಬಕಮೂರ್ತಿ, ಬೀಬಿಜಾನ್, ರವಿಹಿತ್ತಲಮನಿ ಮತ್ತು ಸಂಘದ ಎಲ್ಲಾ ಸದಸ್ಯರು ಮೇಲ್ವಿಚಾರಕರು ಕಾವ್ಯ ತೋಟಯ್ಯ ಸೇರಿದಂತೆ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
